
ಪ್ರಜಾವಾಣಿ ವಾರ್ತೆಕಾಸರಗೋಡುಪಿಟಿಐ): ಜಿಲ್ಲೆಯ ಮದಿಕೈ ಗ್ರಾಮದ ಜನತೆಯಲ್ಲಿ ಭೀತಿಮೂಡಿಸಿ ನಿದ್ದೆಗೆಡಿಸಿದ್ದ ಏಳು ವರ್ಷದ ಹುಲಿಯನ್ನು ಮಂಗಳವಾರ ಮುಂಜಾನೆ ಸೆರೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ವಾರಗಳಿಂದ ರಾತ್ರಿ ವೇಳೆಗ್ರಾಮಕ್ಕೆ ಲಗ್ಗೆ ಇಡುತ್ತಿದ್ದ ಹುಲಿ, ಗ್ರಾಮದ ನಾಯಿ ಹಾಗೂ ಮೇಕೆಗಳನ್ನು ಹಿಡಿದು ತಿನ್ನುತ್ತಿತ್ತು. ಹೀಗಾಗಿ ಹುಲಿಯ ಭಯದಲ್ಲೇ ಗ್ರಾಮಸ್ಥರು ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಅರಣ್ಯ ಸಿಬ್ಬಂದಿಯ ನೆರವಿನೊಂದಿಗೆ ಗ್ರಾಮಸ್ಥರು ಮುಂಜಾನೆ 3 ಗಂಟೆ ಸುಮಾರಿಗೆ ಹುಲಿಯನ್ನು ಸೆರೆಹಿಡಿದರು. ನಂತರ ವೈನಾಡ್ ಜಿಲ್ಲೆಯ ಮುತ್ತಂಗ ಸಂರಕ್ಷಿತ ಅಭಯಾರಣ್ಯಕ್ಕೆ ಹುಲಿಯನ್ನು ಸಾಗಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.