ADVERTISEMENT

ಕೇಜ್ರಿವಾಲ್ ವಿರುದ್ಧದ ಪ್ರಕರಣ ಇತ್ಯರ್ಥ

ಪಿಟಿಐ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST
ಕೇಜ್ರಿವಾಲ್ ವಿರುದ್ಧದ ಪ್ರಕರಣ ಇತ್ಯರ್ಥ
ಕೇಜ್ರಿವಾಲ್ ವಿರುದ್ಧದ ಪ್ರಕರಣ ಇತ್ಯರ್ಥ   

ನವದೆಹಲಿ : ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರರ ವಿರುದ್ಧ ಹೂಡಿದ್ದ ₹10 ಕೋಟಿಯ ಮಾನನಷ್ಟ ಮೊಕದ್ದಮೆ ಪ್ರಕರಣ ಇತ್ಯರ್ಥವಾಗಿದೆ.

ಕೇಜ್ರಿವಾಲ್, ಎಎಪಿ ಮುಖಂಡರಾದ ರಾಘವ್ ಚಂದ್ರಾ, ಸಂಜಯ್ ಸಿಂಗ್, ಅಶುತೋಷ್ ಮತ್ತು ದೀಪಕ್ ಬಾಜ್‌ಪೈ ಅವರು ಜೇಟ್ಲಿ ಅವರ ಕ್ಷಮೆ ಕೋರಿದ್ದರು. ಈ ಸಂಬಂಧ ತಾವು ರಾಜಿ ಒಪ್ಪಂದಕ್ಕೆ ಬಂದಿರುವುದಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಸಹಾಯ್ ಅವರು ಪ್ರಕರಣ ಮುಕ್ತಾಯಗೊಳಿಸಿದರು. ಆದರೆ ಕುಮಾರ್ ವಿಶ್ವಾಸ್ ಅವರು ಕ್ಷಮೆ ಕೋರದ ಕಾರಣ, ಅವರ ವಿರುದ್ಧದ ಪ್ರಕರಣ ಮುಂದುವರಿಯಲಿದೆ ಎಂದರು.

ವಿಶ್ವಾಸ್ ಆಗಲೀ ಅಥವಾ ಅವರ ಪರ ವಕೀಲರಾಗಲೀ ಮುಂದಿನ ವಿಚಾರಣೆ (ಏ.26) ವೇಳೆಗೆ ಹಾಜರಾಗದಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಕೋರ್ಟ್ ತಿಳಿಸಿತು.

ADVERTISEMENT

ಕೇಜ್ರಿವಾಲ್ ವಿರುದ್ಧ ಜೇಟ್ಲಿ ಅವರು ದಾಖಲಿಸಿದ್ದ ಮತ್ತೊಂದು ಪ್ರಕರಣವೂ ಮುಕ್ತಾಯವಾಗಿದೆ. ಕೇಜ್ರಿವಾಲ್ ಅವರ ಹಿಂದಿನ ವಕೀಲ ರಾಮ್ ಜೇಠ್ಮಲಾನಿ ಅವರು ಪಾಟೀಸವಾಲು ನಡೆಸುವ ವೇಳೆ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಕಾರಣಕ್ಕೆ ಜೇಟ್ಲಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.