ಮುಂಬೈ (ಪಿಟಿಐ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮಾಣ ವಚನ ಸಮಾರಂಭದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹಾಗೂ ಅರವಿಂದ್ ಕೇಜ್ರಿವಾಲ್ ಅಪ್ಪಿಕೊಂಡಿದ್ದಕ್ಕೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅರವಿಂದ್ ಅವರ ಸಂಘ ಬಿಟ್ಟಿದ್ದು ಒಳ್ಳೆಯದಾಯ್ತು. ಇಲ್ಲವಾದರೆ ನಾನೂ ಅಂಥದ್ದೆ ಇಕ್ಕಟ್ಟು ಎದುರಿಸಬೇಕಿತ್ತು’ ಎಂದು ಹಜಾರೆ ಅವರು ಅಭಿಪ್ರಾಯ ಪಟ್ಟರು.
ತಮ್ಮ ಸ್ವಗ್ರಾಮ ಅಹ್ಮದನಗರ ಜಿಲ್ಲೆಯ ರಾಳೆಗಣ ಸಿದ್ಧಿಯಲ್ಲಿ ಮಾತನಾಡಿದ ಅವರು, ‘ಲಾಲು ಅವರ ಕೈಕುಲುಕುವುದು ಹಾಗೂ ಅವರನ್ನು ಅಪ್ಪಿಕೊಳ್ಳುವುದು ಸರಿಯಲ್ಲ’ ಎಂದರು.
ಲಾಲು ಅವರನ್ನು ವೇದಿಕೆಯಲ್ಲಿ ಅಪ್ಪಿಕೊಂಡು ತೀವ್ರ ಮುಜುಗರ ಹಾಗೂ ಟೀಕೆ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ‘ಲಾಲು ಅವರೇ ನನ್ನನ್ನು ಎಳೆದು ಅಪ್ಪಿ, ಕೈ ಮೇಲಕ್ಕೆ ಎತ್ತಿದ್ದರು’ ಎಂದು ಸೋಮವಾರವಷ್ಟೇ ಸ್ಪಷ್ಟೀಕರಣ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.