ತಿರುವನಂತಪುರ (ಪಿಟಿಐ): ಕೇರಳದ ದಿವಂಗತ ಫಾದರ್ ಕುರಿಯಕೋಸ್ ಇಲಿಯಾಸ್ ಚಾವರ ಮತ್ತು ದಿವಂಗತ ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರವಾಗಿ ಭಾನುವಾರ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಲ್ಲಿ ಸಂತ ಪದವಿಯನ್ನು ಪ್ರದಾನ ಮಾಡಲಿದ್ದಾರೆ.
ನ ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ ನಡೆಯುವ ವಿಶೇಷ ಸಾಮೂಹಿಕ ಪ್ರಾರ್ಥನಾ ಅಧಿವೇಶನದಲ್ಲಿ ಪೋಪ್ ಅವರು ಈ ಇಬ್ಬರಿಗೆ ಸಂತ ಪದವಿಯನ್ನು ಪ್ರದಾನಿಸಲಿದ್ದಾರೆ.
ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಲು ಕೇರಳದ ಚರ್ಚ್ಗಳ ನಿಯೋಗದೊಂದಿಗೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್ ಅವರೂ ವ್ಯಾಟಿಕನ್ಗೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.