ನವದೆಹಲಿ (ಪಿಟಿಐ): ಕೇರಳದ ವೃತ್ತಪತ್ರಿಕಾ ವಿತರಕರ ಒಂದು ವರ್ಗ ನಿರ್ದಿಷ್ಟ ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಮಂಗಳವಾರದಿಂದ (ಮಾ. 20) ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದನ್ನು `ಐಎನ್‌ಎಸ್~ (ಭಾರತೀಯ ವೃತ್ತಪತ್ರಿಕಾ ಸಂಘ) ಖಂಡಿಸಿದೆ.
`ಬಹುತೇಕ ಪತ್ರಿಕಾ ಏಜೆಂಟರುಗಳು ಈ ರೀತಿಯ ಮುಷ್ಕರಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಆದರೆ, ಅವರಲ್ಲಿ ಒಂದು ಬಣ ಅವರಿಗೆಲ್ಲ ಬೆದರಿಕೆ ಒಡ್ಡುತ್ತಿದೆ. ಭೀತಿ ಹುಟ್ಟಿಸುವ ಮೂಲಕ ಪತ್ರಿಕೆಗಳ ವಿತರಣೆಗೆ ಅಡ್ಡಿ ಮಾಡಲು ಯತ್ನಿಸುತ್ತಿದೆ.
ಪತ್ರಿಕೆ ವಿತರಿಸುವವರು, ವಾಹನಗಳ ಮಾಲೀಕರು ಹಾಗೂ ಪತ್ರಿಕೆಗಳ ಸಾಗಣೆಯ ಕೆಲಸದಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೂ ಬೆದರಿಕೆ ಒಡ್ಡುತ್ತಿದೆ~ ಎಂದು ಭಾರತೀಯ ವೃತ್ತಪತ್ರಿಕಾ ಸಂಘದ ಅಧ್ಯಕ್ಷ ಆಶೀಶ್ ಬಗ್ಗಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.