ADVERTISEMENT

ಕೋರ್ಟ್‌ಗೆ ಹಾಜರು: ಶೀಲಾ ಕೌಲ್‌ಗೆ ಆದೇಶ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ನವದೆಹಲಿ (ಪಿಟಿಐ): ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಲು `ವಯಸ್ಸು ಮಾನದಂಡ~ ಆಗಲಾರದು ಎಂದು ಸ್ಪಷ್ಟವಾಗಿ ಹೇಳಿರುವ ಸಿಬಿಐ ನ್ಯಾಯಾಲಯ, 98 ವರ್ಷದ ಕೇಂದ್ರದ ಮಾಜಿ ಸಚಿವೆ ಶೀಲಾ ಕೌಲ್ ಅವರಿಗೆ ವಿಚಾರಣೆಗೆ ಹಾಜರಾಗಲು ಆದೇಶಿಸಿದೆ.  

1996ರಲ್ಲಿ ನಡೆದ ಸರ್ಕಾರಿ ವಸತಿ ಹಂಚಿಕೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಕೌಲ್ ಅವರ ಇಳಿವಯಸ್ಸಿನ ಕಾರಣದಿಂದಾಗಿಯೇ ಅವರು ವಿಚಾರಣೆಗೆ ಹಾಜರಾಗುವುದರಿಂದ `ವಿನಾಯಿತಿ~ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ನ್ಯಾಯಾಲಯವು  ಇದೇ ವೇಳೆ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.