ADVERTISEMENT

ಕ್ಯಾಪ್ಟನ್‌ ಸುನೀಲ್‌ ಬಿಡುಗಡೆ

ಕಡಲ್ಗಳ್ಳರಿಗೆ ನೆರವು ಆರೋಪ:ಟೋಗೊದಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ‘ಪಶ್ಚಿಮ ಆಫ್ರಿಕಾದ ಟೋಗೊ ದೇಶ­ದಲ್ಲಿ ಜುಲೈ ತಿಂಗಳಿನಿಂದ ಬಂಧಿತರಾ­ಗಿದ್ದ ಭಾರತದ ಸರಕು ಸಾಗಣೆ ಹಡಗಿನ ಕ್ಯಾಪ್ಟನ್‌ ಸುನೀಲ್‌ ಜೇಮ್ಸ್‌ ಬಿಡುಗಡೆಯಾಗಿದ್ದಾರೆ’ ಎಂದು ವಿದೇ­ಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.

ಇವರ ಜತೆಗೆ  ಭಾರತದ ಮತ್ತೊಬ್ಬ ಕ್ಯಾಪ್ಟನ್‌ ವಿಜಯನ್‌ ಅವರನ್ನೂ ಬಿಡು­ಗಡೆ ಮಾಡಲಾಗಿದೆ. ಇವರಿ­ಬ್ಬರು ಶುಕ್ರವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.   ಜುಲೈ 31ರಂದು ಸುನೀಲ್‌ ಜೇಮ್ಸ್‌ ಅವರಿದ್ದ ಹಡಗಿನ (ಎಂಟಿ ಓಷನ್‌ ಸೆಂಚುರಿಯನ್‌) ಮೇಲೆ ಕಡಲ್ಗಳ್ಳರು ಆಕ್ರಮಣ ಮಾಡಿದ್ದರು. ಕಡಲ್ಗಳ್ಳರಿಗೆ ನೆರವು ನೀಡಿದ ಆರೋಪದ ಮೇಲೆ ಸುನೀಲ್‌ ಹಾಗೂ ಇನ್ನಿಬ್ಬರು ಸಿಬ್ಬಂದಿ­ಯನ್ನು ಟೋಗೊದಲ್ಲಿ ಬಂಧಿಸ­ಲಾಗಿತ್ತು.

ಈ ನಡುವೆ ಡಿಸೆಂಬರ್‌ ಎರಡರಂದು ಸುನೀಲ್‌ ಅವರ 11 ತಿಂಗಳ ಗಂಡು ಮಗು  ಸೆಪ್ಟಿಸೀಮಿಯಾ (ರಕ್ತನಂಜು)­ದಿಂದ ಆಸ್ಪತ್ರೆಯಲ್ಲಿ ಅಸುನೀಗಿತ್ತು. ಮಗುವಿನ ಅಂತ್ಯಕ್ರಿಯೆ ನೆರವೇರಿಸಲು ಸುನೀಲ್‌ ಅವರನ್ನು ಶೀಘ್ರವೇ ಬಿಡು­ಗಡೆ ಮಾಡಬೇಕೆಂದು ಪತ್ನಿ ಅದಿತಿ, ಕುಟುಂಬದವರು ಕೇಳಿಕೊಂಡಿದ್ದರು. ಈ ಸಂಬಂಧ, ಅಕ್ರಾದಲ್ಲಿರುವ ಭಾರತದ ಅಧಿಕಾರಿಗಳು ಟೋಗೊ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅಲ್ಲದೇ ಸುನೀಲ್‌ ಅವರನ್ನೂ ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.