ADVERTISEMENT

ಗಂಗೂಲಿಗೆ ಬೆದರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಕೋಲ್ಕತಾ (ಪಿಟಿಐ): ನಿವೃತ್ತ ನ್ಯಾಯಮೂರ್ತಿ ಎ.ಕೆ.ಗಂಗೂಲಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬುರ್ದ್ವಾನ್‌ ನ್ಯಾಯಾಲಯದ ಮಹಿಳಾ ಕ್ಲರ್ಕ್‌ ಒಬ್ಬರು ಹಾಕಿರುವ ಬೆದರಿಕೆಯನ್ನು ಗಣನೆಗೆ ತೆಗೆದುಕೊಂಡಿರುವ  ಪಶ್ಚಿಮಬಂಗಾಳ ಮಾನವ ಹಕ್ಕು ಆಯೋಗ, ಈ ವಿಷಯವಾಗಿ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಪಶ್ಚಿಮಬಂಗಾಳ ನ್ಯಾಯಾಂಗ ಕ್ಲರ್ಕ್‌ ಮಂಡಳಿಗೆ ಸೂಚಿಸಿದೆ.

‘ನೀವು ಸಿಪಿಎಂನಿಂದ ಲಾಭ ಪಡೆದುಕೊಂಡಿದ್ದೀರಿ. ನೀವು ವಿಶ್ವಾಸಕ್ಕೆ ಅರ್ಹರಲ್ಲ. ಮಮತಾ  ದೀದಿ ನಿಮಗೆ ಮನ್ನಣೆ ನೀಡಿದ್ದಾರೆ. ಆದರೆ ನೀವು ಅವರನ್ನು ಪೇಚಿಗೆ ಸಿಲುಕಿಸುತ್ತಿದ್ದೀರಿ. ನಾನು ನಿಮ್ಮ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುತ್ತೇನೆ. ಅಹಂಕಾರದಿಂದ ಮೆರೆಯಬೇಡಿ’ ಎಂದು ಆ ಮಹಿಳೆ ಸೆಪ್ಟೆಂಬರ್‌ 18ರಂದು ಗಂಗೂಲಿ ಅವರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.