ADVERTISEMENT

ಗಡಿ ದಾಟಿದ ಪ್ರಿಯಾಂಕಾ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST
ಗಡಿ ದಾಟಿದ ಪ್ರಿಯಾಂಕಾ
ಗಡಿ ದಾಟಿದ ಪ್ರಿಯಾಂಕಾ   

ಸುಲ್ತಾನ್‌ಪುರ (ಪಿಟಿಐ): ಇದುವರೆಗೂ ರಾಯ್‌ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಸಹೋದರ ಹಾಗೂ ತಾಯಿಯ ಪರ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ವಾದ್ರಾ, ಇದೀಗ ಮತದಾರರ ವಿಶ್ವಾಸ ಗಳಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಹೊರಭಾಗದಲ್ಲೂ ಭಾನುವಾರ ರೋಡ್‌ಶೋ ನಡೆಸಿದರು.

ಲಂಬುವಾದಿಂದ ಆರಂಭವಾದ ರೋಡ್‌ಶೋನಲ್ಲಿ ಸಹೋದರ ರಾಹುಲ್ ಗಾಂಧಿ ಅವರ ಜೊತೆ ಪ್ರಿಯಾಂಕಾ ಪಾಲ್ಗೊಂಡಿದ್ದರು. ಉತ್ತರ ಪ್ರದೇಶದ ಭವಿಷ್ಯವನ್ನೇ ಬದಲಾಯಿಸಲು ತಾವು ಹೋರಾಡುತ್ತಿದ್ದು, ಕಾಂಗ್ರೆಸ್‌ಗೆ ಕೇವಲ ಐದು ವರ್ಷಗಳ ಕಾಲಾವಧಿ ಕೊಡಿ ಎಂದು ರಾಹುಲ್  ಇದೇ ವೇಳೆ ಜನರನ್ನು ಕೋರಿದರು. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವ ಮೂಲಕ ಬಡತನ ತೊಲಗಿಸುವುದೇ ಮುಖ್ಯ ಧೋರಣೆ ಎಂದೂ ರಾಹುಲ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.