ADVERTISEMENT

ಗಾಜಾ ಚಂಡಮಾರುತ ಅಪ್ಪಳಿಸುವ ಸಂಭವ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:37 IST
Last Updated 11 ನವೆಂಬರ್ 2018, 19:37 IST
ಚಂಡಮಾರುತದ ಚಲನೆ. ಚಿತ್ರ: ಹವಾಮಾನ ಇಲಾಖೆ ಟ್ವಿಟ್‌
ಚಂಡಮಾರುತದ ಚಲನೆ. ಚಿತ್ರ: ಹವಾಮಾನ ಇಲಾಖೆ ಟ್ವಿಟ್‌   

ಚೆನ್ನೈ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದ್ದು, ಇದರಿಂದಾಗಿ ಕಡಲೂರಿನಲ್ಲಿ ನವೆಂಬರ್ 15ರಂದು ‘ಗಾಜಾ’ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಹೀಗಾಗಿ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಇದೆ.

ಕಡಲೂರು ಜಿಲ್ಲಾಡಳಿತ ಭಾನುವಾರ ಈ ಕುರಿತು ಸಭೆ ನಡೆಸಿದ್ದು, ಅಗತ್ಯ ಬಿದ್ದಲ್ಲಿ ತಗ್ಗುಪ್ರದೇಶದ ಜನರನ್ನು ಸ್ಥಳಾಂತರಿಸುವ ಕುರಿತು ಪರಿಶೀಲನೆ ನಡೆಸಿತು.

ADVERTISEMENT

ಪರಿಸ್ಥಿತಿ ಎದುರಿಸಲು ಸಿದ್ಧವಿರುವುದಾಗಿ ತಿಳಿಸಿರುವ ತಮಿಳುನಾಡು ಸರ್ಕಾರ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಿದೆ.

‘ತಮಿಳುನಾಡಿನ ಉತ್ತರ ಕರಾವಳಿ, ಪಕ್ಕದಲ್ಲಿರುವ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ನವೆಂಬರ್ 14ರ ಸಂಜೆಯಿಂದ ಮಳೆ ಆರಂಭವಾಗಲಿದ್ದು, ಮಳೆಯ ತೀವ್ರತೆ ಹೆಚ್ಚುತ್ತಾ ಹೋಗಲಿದೆ’ ಎಂದು ಐಎಂಡಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.