ADVERTISEMENT

ಗಾಯತ್ರಿ ಪ್ರಜಾಪತಿ ಪರಾರಿಯಾಗದಂತೆ ಕಟ್ಟೆಚ್ಚರ

ಪಿಟಿಐ
Published 3 ಮಾರ್ಚ್ 2017, 20:36 IST
Last Updated 3 ಮಾರ್ಚ್ 2017, 20:36 IST
ಗಾಯತ್ರಿ ಪ್ರಜಾಪತಿ ಪರಾರಿಯಾಗದಂತೆ ಕಟ್ಟೆಚ್ಚರ
ಗಾಯತ್ರಿ ಪ್ರಜಾಪತಿ ಪರಾರಿಯಾಗದಂತೆ ಕಟ್ಟೆಚ್ಚರ   

ನವದೆಹಲಿ: ಉತ್ತರ ಪ್ರದೇಶ ಸಚಿವ, ಅತ್ಯಾಚಾರ  ಆರೋಪ ಎದುರಿಸುತ್ತಿರುವ ಗಾಯತ್ರಿ ಪ್ರಜಾಪತಿ ದೇಶದಿಂದ ಪರಾರಿಯಾಗುವುದನ್ನು ತಡೆಯುವ ಸಲುವಾಗಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಜಾಪತಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅವರು ದೇಶದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಅವರ ವಿರುದ್ಧ ‘ರದ್ದತಿ ಪತ್ರ’ ಹೊರಡಿಸಲಾಗಿದೆ.

ಎಂದು ಅಧಿಕೃತ ಮೂಲಗಳು ತಿಳಿಸಿವೆ. ರದ್ದತಿ ಪತ್ರ ಹೊರಡಿಸಿದ್ದಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿರುವ ವಲಸೆ ಅಧಿಕಾರಿಗಳಿಗೆ ಆರೋಪಿಯ ಬಗ್ಗೆ ಮಾಹಿತಿ ರವಾನೆಯಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.