ADVERTISEMENT

ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!

ಪಿಟಿಐ
Published 13 ಡಿಸೆಂಬರ್ 2017, 4:34 IST
Last Updated 13 ಡಿಸೆಂಬರ್ 2017, 4:34 IST
ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!
ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!   

ಚೋಟಾ ಉದಯ್‍ಪುರ್: ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾಗಿ ಮೂರು ವರ್ಷಗಳೇ ಕಳೆದರೂ ಮೋದಿ ತವರು ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರು ಮೋದಿ ಇನ್ನೂ ಗುಜರಾತಿನ ಮುಖ್ಯಮಂತ್ರಿಯಾಗಿಯೇ ಇದ್ದಾರೆ ಎಂದು ಅಂದುಕೊಂಡಿದ್ದಾರೆ.

ಪರಿಶಿಷ್ಟ ವರ್ಗದವರ ಅಧಿಪತ್ಯವಿರುವ ಇಲ್ಲಿನ ಚೋಟಾ ಉದಯ್‍ಪುರ್ ಜಿಲ್ಲೆಯ ಜನರಿಗೆ ರಾಜಕೀಯದ ಬಗ್ಗೆ ಏನು ಗೊತ್ತು ಎಂದು ಕೇಳಿದರೆ, ಅವರಿಗೆ ಗೊತ್ತಿರುವುದು ಮೂರೇ ಮೂರು ವಿಷಯಗಳು. ಮೋದಿ, ಮೋದಿಯವರ ಪಕ್ಷ ಮತ್ತು ಕಾಂಗ್ರೆಸ್.

ಕೆಲವರಿಗೆ ಮಾತ್ರ ಬಿಜೆಪಿ ಅಂದರೆ ಗೊತ್ತು, ಇನ್ನುಳಿದವರಿಗೆ ಅದು ಮೋದಿಯವರ ಪಕ್ಷ. ಕಾಂಗ್ರೆಸ್ ಪಕ್ಷದ ಬಗ್ಗೆ ಕೇಳಿದರೆ ಅವರಿಗೆ ಗೊತ್ತಿರುವುದು ಇಂದಿರಾಗಾಂಧಿ ಮಾತ್ರ!

ADVERTISEMENT

ನಮ್ಮ ಹಿರೀಕರು ಕಾಂಗ್ರೆಸ್‍ಗೇ ಮತ ನೀಡುತ್ತಿದ್ದರು. ಇದೀಗ ಸುತ್ತುಮುತ್ತಲಿನ ಗ್ರಾಮದವರು ಮೋದಿ ಸಾಹೇಬರ ಪಕ್ಷಕ್ಕೆ ಮತ ನೀಡುತ್ತಾರೆ ಅಂತಾರೆ 50ರ ಹರೆಯದ ರಾಮ್‍ಸಿನ್ಹಾ ರಾತ್ವಾ.

ಚೋಟಾ ಉದಯ್‍ಪುರ್ ನಿವಾಸಿಯಾಗಿರುವ ರಾಮ್‍ಸಿನ್ಹಾ ಮತ್ತು ಕಾಂಡಾ ಗ್ರಾಮದ  ಕೆಲವು ಜನರನ್ನು ಮಾತನಾಡಿಸಿದಾಗ ಅವರಿಗೆ ಕಮಲ ಅಂದರೆ ಮೋದಿಯವರ ಪಕ್ಷ ಎಂದು ಗೊತ್ತಿದೆ. ಆದರೆ ಬಿಜೆಪಿ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ರೈತರಾದ ಇವರಿಗೆ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಗೆದ್ದಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಮೋದಿ ಮತ್ತೊಮ್ಮೆ ಗುಜರಾತಿನ ಮುಖ್ಯಮಂತ್ರಿ ಆಗುತ್ತಾರೆ ಅಂತಾರೆ ಇವರು.

ಚೋಟಾ ಉದಯ್‍ಪುರ್ ಕ್ಷೇತ್ರದ ಇನ್ನೊಂದು ಗ್ರಾಮವಾದ ಜೋಗ್‍ಪುರ್‍‍ನ ಮತದಾರರಾದ ದಿಲೀಪ್ ರಾತ್‍ವಾ ಅವರ ಪ್ರಕಾರ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿರುವುದು ಮೋದಿ ಮತ್ತು ಕಾಂಗ್ರೆಸ್ ನಡುವೆ.ಅದೇ ವೇಳೆ ಇಲ್ಲಿನ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮೋದಿ ಜನಪ್ರಿಯತೆಯ ನಡುವೆ ಸ್ಪರ್ಧೆ ಇದೆ ಅಂತಾರೆ ಪವಿ ಜೆಟ್‍ಪುರ್‍‍ನ ಕಾಂಗ್ರೆಸ್ ಕಾರ್ಯಕರ್ತ ರಮೇಶ್ ಪಟೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.