ADVERTISEMENT

ಗುಜರಾತ್ ಗಲಭೆ ಪ್ರಕರಣ: ವಿಚಾರಣೆ ಹಳಿತಪ್ಪಿಸಲು ಲಂಚ- ಮಲ್ಲಿಕಾ ಸಾರಾಭಾಯ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಅಹಮದಾಬಾದ್ (ಪಿಟಿಐ):  ಗುಜರಾತ್ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ತಾವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಹಳಿ ತಪ್ಪಿಸಲು ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ವಕೀಲರಿಗೆ ಲಂಚ ಕೊಡಲು ಯತ್ನಿಸಿದ್ದರು ಎಂದು ಖ್ಯಾತ ಓಡಿಸ್ಸಿ ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯ್ ಭಾನುವಾರ ಆರೋಪಿಸಿದ್ದಾರೆ.

2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯಲ್ಲಿ ರಾಜ್ಯಾಡಳಿತ ಹಾಗೂ ಮೋದಿ ಭಾಗಿಯಾಗಿದ್ದಾಗಿ ಸಾರಾಭಾಯ್ ಅದೇ ವರ್ಷ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿದ್ದರು.

`ಆಗ ರಾಜ್ಯ ಗುಪ್ತಚರ ದಳದ ಮುಖ್ಯಸ್ಥ ರಾಗಿದ್ದ  ಆರ್.ಬಿ.ಶ್ರೀಕುಮಾರ್ ಹಾಗೂ ಇನ್ನೊಬ್ಬ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಕರೆದು ನನ್ನ ವಕೀಲರಿಗೆ 10 ಲಕ್ಷ ರೂಪಾಯಿ ಲಂಚ ಕೊಡುವಂತೆ ಮೋದಿ ಹೇಳಿದ್ದರು ಎಂದು~ ಮಲ್ಲಿಕಾ ದೂರಿದ್ದಾರೆ.

ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ  ಜಿ.ಟಿ.ನಾನಾವತಿ ಹಾಗೂ ಅಕ್ಷಯ್ ಮೆಹ್ತಾ ಆಯೋಗಕ್ಕೆ ಇತ್ತೀಚೆಗೆ ಶ್ರೀಕುಮಾರ್ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರತಿಯನ್ನು ಸಾರಾಭಾಯ್ ಮಾಧ್ಯಮಗಳಿಗೆ ವಿತರಿಸಿದರು.

ವಿಚಾರಣೆ ಹಳಿತಪ್ಪಿಸಲು ಮಲ್ಲಿಕಾ ಅವರ  ವಕೀಲರಿಗೆ ಲಂಚ ಕೊಡುವಂತೆ ಮೋದಿ ನೀಡಿದ ಸೂಚನೆಯನ್ನು ಶ್ರೀಕುಮಾರ್ ಈ ಪ್ರಮಾಣ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.