ADVERTISEMENT

ಗುಜರಾತ್: ಮೂರು ಮತಗಟ್ಟೆಗಳಲ್ಲಿ ಮರು ಚುನಾವಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 13:24 IST
Last Updated 15 ಡಿಸೆಂಬರ್ 2012, 13:24 IST

ಅಹಮದಾಬಾದ್ (ಪಿಟಿಐ): ಗುಜರಾತ್‌ನಲ್ಲಿ ಇತ್ತೀಚಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ತಾಂತ್ರಿಕ ತೊಂದರೆಗೆ ಒಳಗಾದ ಮೂರು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗ ಶನಿವಾರ ಆದೇಶಿಸಿದೆ.

ಡಿಸೆಂಬರ್ 13ರಂದು ಜರುಗಿದ ಮೊದಲ ಹಂತದ ಮತದಾನದ ವೇಳೆ ಮೂರು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ತಾಂತ್ರಿಕ ತೊಂದರೆಯಿಂದ ಮತದಾನದಲ್ಲಿ ಅಡಚಣೆ ಉಂಟಾಗಿತ್ತು.

ಮತ ಯಂತ್ರದ ತೊಂದರೆಗೆ ಒಳಗಾದ ಜಾಮಜೋಧಪುರ ವಿಧಾನಸಭೆ ಕ್ಷೇತ್ರದ ಕೊಟಡ ಎಂಬಲ್ಲಿರುವ ಮತಗಟ್ಟೆ ಸಂಖ್ಯೆ 169, ಜಾಮ್‌ನಗರ ಜಿಲ್ಲೆಯಲ್ಲಿರುವ ಭಾವ್‌ನಗರ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಮಲೆಜ್ -3 ಎಂಬಲ್ಲಿರುವ ಮತಗಟ್ಟೆ ಸಂಖ್ಯೆ 69 ಹಾಗೂ ಸೂರತ್‌ನ ಉತ್ತರ ವಿಧಾನಸಭೆ ಕ್ಷೇತ್ರದ ಕೊಟರ್‌ಗಮ್‌ನಲ್ಲಿರುವ ಮತಗಟ್ಟೆ ಸಂಖ್ಯೆ 27ರಲ್ಲಿ  ಭಾನುವಾರದಂದು ಮರು ಮತದಾನ ನಡೆಸುವಂತೆ ಆಯೋಗ ಆದೇಶಿಸಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಅಶೋಕ್ ಮನೆಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.