
ಜಲ್ ಪೈಗುರಿ (ಪ.ಬ), (ಪಿಟಿಐ) : ಬೆಂಗಳೂನಿಂದ- ಗುವಾಹಟಿಗೆ ಹೊರಟಿದ್ದ ರೈಲಿನಿಂದ ಪ್ರಯಾಣಿಕರನ್ನು ಹೊರಕ್ಕೆ ಎಸೆಯಲ್ಪಟ್ಟಿದರಿಂದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಅಪರಿಚಿತ ವ್ಯಕ್ತಿಗಳು ರೈಲಿನಲ್ಲಿ ದರೋಡೆ ಮಾಡಿದರು ಅಲ್ಲದೆ ಪ್ರಯಾಣಿಕರನ್ನು ತಳಿಸಿ (ಹೊಡೆದು) ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸಹ ಪ್ರಯಾಣಿಕ ಗಾಯಾಳೊಬ್ಬರು ಹೇಳಿದರು.
ನವ ಜಲ್ ಪೈಗುರಿ ಸಮೀಪದ ಬೆಲಾಕೊಬ ರೈಲ್ವೆ ನಿಲ್ದಾಣದ ಬಳಿ ಮುಂಜಾನೆ 2 ಶವಗಳು ಹಾಗೂ 7 ಗಾಯಾಳುಗಳು ರೈಲು ಹಳಿಗಳ ಮೇಲೆ ಕಾಣಿಸಿದರು ಎಂದು ಪೋಲಿಸರು ತಿಳಿಸಿದರು.
ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದರು. ಈ ಘಟನೆಗೆ ಕಾರಣ ತಿಳಿದಿಲ್ಲವೆಂದು ಹಾಗು ತನಿಖೆ ನಡೆಸುವುದಾಗಿ ನವ ಜಲ್ ಪೈಗುರಿ ಪ್ರದೇಶ ವ್ಯವಸ್ಥಾಪಕರಾದ (ರೈಲ್ವೆ) ಪಾರ್ಥಸಾರಥಿ ಅವರು ಹೇಳಿದ್ದಾರೆ.
ಗಾಯಾಳುಗಳನ್ನ ಉತ್ತರ ಬಂಗಾಳ ಮೆಡಿಕಲ್ ಕಾಲೇಜ್ ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.