ADVERTISEMENT

ಚುನಾವಣಾಪೂರ್ವ ಸಮೀಕ್ಷೆ ನಿಷೇಧ?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಚುನಾವಣೆಯ   ಸಮಯದಲ್ಲಿ ನಡೆಸಲಾಗುವ ಚುನಾ­ವಣಾ ಪೂರ್ವ ಸಮೀಕ್ಷೆಗಳನ್ನು ನಿಷೇ ಧಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಚುನಾವಣಾ ಆಯೋಗ ಸಲ್ಲಿಸಿರುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದ್ದು, ಆಯೋಗ ದೊಂದಿಗೆ ಚರ್ಚಿಸಿದ ನಂತರ  ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ  ಎಂದು ಮೂಲಗಳು ತಿಳಿಸಿವೆ.

ಚುನಾವಣೆ  ದಿನಾಂಕ ಘೋಷಣೆ­ಯಾದ ದಿನದಿಂದ ಅಂತಿಮ ಹಂತದ ಮತದಾನದವರೆಗಿನ ಅವಧಿಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆ, ಅವುಗಳ ಪ್ರಕಟಣೆ ಹಾಗೂ ಪ್ರಸಾರ ನಿಷೇಧಿ­ಸುವಂತೆ ಚುನಾವಣಾ ಆಯೋಗ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಸದ್ಯ ಜಾರಿಯಲ್ಲಿರುವ ಕಾನೂನಿನಲ್ಲಿ ಮತದಾನದ 48 ಗಂಟೆಗಳಿಗೂ ಮುನ್ನ ಮಾತ್ರ  ಆಯೋಗ ಇಂತಹ ಸಮೀಕ್ಷೆ ನಿಷೇಧಿಸುವ ಅಧಿಕಾರ ಹೊಂದಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಟಾರ್ನಿ ಜನರಲ್‌ ಜಿ.ಇ. ವಹನ್ವತಿ ಅವರು ಆಯೋಗದ  ಪ್ರಸ್ತಾವವನ್ನು ಬೆಂಬಲಿಸಿ ದ್ದಾರೆ. ತಮ್ಮ ಈ ಅಭಿಪ್ರಾಯವನ್ನು ಅವರು ಸರ್ಕಾರಕ್ಕೂ ತಿಳಿಸಿದ್ದಾರೆ.

ಕಾಸಿಗಾಗಿ ಸುದ್ದಿ ಮೇಲೆ ನಿಗಾ: ನವೆಂಬರ್‌ನಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ‘ಕಾಸಿಗಾಗಿ ಸುದ್ದಿ’ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.