ADVERTISEMENT

ಚುನಾವಣೆಗೆ ಅಡ್ಡಿಪಡಿಸಿದ ಎಎಪಿ ಶಾಸಕ ತಪ್ಪಿತಸ್ಥ

ಪಿಟಿಐ
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಮನೋಜ್‌ ಕುಮಾರ್‌
ಮನೋಜ್‌ ಕುಮಾರ್‌    

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪೂರ್ವ ದೆಹಲಿಯ ಕಲ್ಯಾಣ್‌ಪುರಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡಿದ ಪ್ರಕರಣದಲ್ಲಿ ಎಎಪಿ ಶಾಸಕ ಮನೋಜ್‌ ಕುಮಾರ್‌ ಅವರನ್ನು ದೆಹಲಿ ನ್ಯಾಯಾಲಯ ಅಪರಾಧಿ ಎಂದು ಹೇಳಿದೆ.

ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಅಡಚಣೆ ಮಾಡಿದ ಅಪರಾಧವು ಭಾರತೀಯ ದಂಡಸಂಹಿತೆ 186ರ ಪ್ರಕಾರ ಮತ್ತು ಮತಗಟ್ಟೆಯಲ್ಲಿ ವ್ಯವಸ್ಥೆ ಹಾಳು ಮಾಡಿದ ತಪ್ಪಿಗೆ ಜನಪ್ರತಿನಿಧಿ ಕಾಯ್ದೆಯ 131ನೇ ಸೆಕ್ಷನ್‌ ಪ್ರಕಾರ ಮನೋಜ್ ಕುಮಾರ್ ಅವರ ವಿರುದ್ಧ ಸರ್ಕಾರಿ ವಕೀಲರು ಮಂಡಿಸಿದ ವಾದ ಮತ್ತು ಸಾಕ್ಷಿಗಳು ವಿಶ್ವಾಸಾರ್ಹವಾಗಿದ್ದು ಅವರು ಅಪರಾಧಿ ಆಗಿದ್ದಾರೆ ಎಂದು ಹೆಚ್ಚುವರಿ ಪ್ರಧಾನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ತೀರ್ಪು ನೀಡಿದ್ದಾರೆ.

ಇದೇ 25ರಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ADVERTISEMENT

ಎಎಪಿ ಅಭ್ಯರ್ಥಿಯಾಗಿದ್ದ ಕುಮಾರ್‌ ನೇತೃತ್ವದಲ್ಲಿ ಸುಮಾರು 50 ಮಂದಿ ಪ್ರತಿಭಟನಾಕಾರರು ಮತಗಟ್ಟೆ ಇದ್ದ ಶಾಲೆಯ ಮುಂಭಾಗದ ಗೇಟ್‌ನ ಬಳಿ ಪ್ರತಿಭಟನೆ ನಡೆಸಿದ್ದರು. ಮತದಾನ ಮುಗಿದ ನಂತರ ಇವಿಎಂಗಳನ್ನು ಸಾಗಿಸಲು ಕೂಡ ಅವಕಾಶ ನೀಡದಂತೆ ಮನೋಜ್‌ ಕುಮಾರ್‌ ಪ್ರತಿಭಟನಾಕಾರರಿಗೆ ತಿಳಿಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.