ADVERTISEMENT

ಛಟ್ ಹಬ್ಬ: ಬಿಹಾರದಲ್ಲಿ ಕಾಲ್ತುಳಿತ- 18 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಪಟ್ನಾ (ಐಎಎನ್‌ಎಸ್): `ಛಟ್~ ಹಬ್ಬದ ಸಂದರ್ಭದಲ್ಲಿ ನೂಕುನುಗ್ಗುಲಿನಿಂದ ತಾತ್ಕಾಲಿಕ ಸೇತುವೆ ಕುಸಿದು ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ಸಂಜೆ ಇಲ್ಲಿ ಸಂಭವಿಸಿದೆ.

ಅದಾಲತ್‌ಗಂಜ್‌ನ ಗಂಗಾ ನದಿಯ ಸ್ನಾನ ಘಟ್ಟದಲ್ಲಿ ಸಂಜೆ ಸೂರ್ಯಾಸ್ತದ ಸಮಯದಲ್ಲಿ `ಛಟ್~ (ಸೂರ್ಯನ ಆರಾಧನೆ) ವ್ರತದ ಪೂಜೆ ಮುಗಿಸಿಕೊಂಡು ಜನರು ಬರುತ್ತಿದ್ದಾಗ  ಈ ದುರ್ಘಟನೆ ನಡೆಯಿತು ಎಂದು ಜಿಲ್ಲಾಡಳಿತ ಹೇಳಿದೆ. `ಬಿದಿರಿನಿಂದ ನಿರ್ಮಿಸಿದ್ದ ಸೇತುವೆಯು ಕುಸಿದು ಬಿದ್ದ ಕಾರಣ ಈ ದುರಂತ ಸಂಭವಿಸಿದೆ.
 
ಸಂಜೆ ಪೂಜೆ ಮುಗಿಸಿದ ಭಕ್ತರು ಮನೆಗೆ ತೆರಳಲು ಧಾವಂತ ಮಾಡಿದರು. ಇದರಿಂದ ಒತ್ತಡ ಹೆಚ್ಚಾಗಿ ಸೇತುವೆ ಕುಸಿಯಿತು. ಸತ್ತವರಲ್ಲಿ ಬಹುತೇಕರು ಭಕ್ತರು ಮತ್ತು ಅವರ ಕುಟುಂಬದವರು~ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 18 ಶವಗಳನ್ನು ಪಟ್ನಾ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.