ADVERTISEMENT

ಜಗತ್ತಿನ ಅತಿ ಹಗುರ ಉಪಗ್ರಹ ಸಿದ್ಧಪಡಿಸಿದ ಭಾರತೀಯ ವಿದ್ಯಾರ್ಥಿ; ಉಡಾವಣೆ ಮಾಡಲಿದೆ ನಾಸಾ

64 ಗ್ರಾಂ ತೂಕದ ಕಲಾಂಸ್ಯಾಟ್‌

ಏಜೆನ್ಸೀಸ್
Published 14 ಮೇ 2017, 16:33 IST
Last Updated 14 ಮೇ 2017, 16:33 IST
ಜಗತ್ತಿನ ಅತಿ ಹಗುರ ಉಪಗ್ರಹ ಸಿದ್ಧಪಡಿಸಿದ ಭಾರತೀಯ ವಿದ್ಯಾರ್ಥಿ; ಉಡಾವಣೆ ಮಾಡಲಿದೆ ನಾಸಾ
ಜಗತ್ತಿನ ಅತಿ ಹಗುರ ಉಪಗ್ರಹ ಸಿದ್ಧಪಡಿಸಿದ ಭಾರತೀಯ ವಿದ್ಯಾರ್ಥಿ; ಉಡಾವಣೆ ಮಾಡಲಿದೆ ನಾಸಾ   

ಮುಂಬೈ: ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌  ವಿನ್ಯಾಸಗೊಳಿಸಿರುವ ಜಗತ್ತಿನ ಅತಿ ಹಗುರ ಉಪಗ್ರಹವು ಉಡಾವಣೆಗೆ ಸಿದ್ಧವಾಗಿದೆ.

ಕೇವಲ 64 ಗ್ರಾಂ ತೂಕದ ಉಪಗ್ರಹವು ನಾಸಾ ಸಂಸ್ಥೆಯ ರಾಕೆಟ್‌ ಮೂಲಕ ಜೂನ್‌ 21ರಂದು ಉಡಾವಣೆಯಾಗಲಿದೆ. ಭಾರತೀಯ ವಿದ್ಯಾರ್ಥಿ ಸಿದ್ಧಪಡಿಸಿರುವ ‘ಕಲಾಂಸ್ಯಾಟ್‌’ ಹೆಸರಿನ ಉಪಗ್ರಹವು ಉಡಾವಣೆಯಾಗುತ್ತಿರುವ ಅತಿ ಹಗುರ ಉಪಗ್ರಹವಾಗಿದೆ.

ಕಲಾಂಸ್ಯಾಟ್‌ ಮಿಷನ್‌ ಒಟ್ಟು ಅವಧಿ 240 ನಿಮಿಷಗಳಾಗಿದ್ದು, ಉಪಗ್ರಹವು ಉಪ–ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸಲಿದೆ. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾಗಿರುವ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಲ್ಲಪಟ್ಟಿಯ ರಿಫತ್‌ ವಿವರಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ADVERTISEMENT

ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ ‘ಕ್ಯೂಬ್ಸ್‌ ಇನ್‌ ಸ್ಪೇಸ್‌’ ಸ್ಪರ್ಧೆಯ ಮೂಲಕ ರಿಫತ್‌ ಅವರ 64 ಗ್ರಾಂ ಉಪಗ್ರಹ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.