ADVERTISEMENT

ಜನರ ಆಕ್ರೋಶಕ್ಕೆ ವೇದಿಕೆಯಾದ ಹೋರಾಟ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2011, 19:30 IST
Last Updated 28 ಆಗಸ್ಟ್ 2011, 19:30 IST
ಜನರ ಆಕ್ರೋಶಕ್ಕೆ ವೇದಿಕೆಯಾದ ಹೋರಾಟ
ಜನರ ಆಕ್ರೋಶಕ್ಕೆ ವೇದಿಕೆಯಾದ ಹೋರಾಟ   

ನವದೆಹಲಿ: ಅಣ್ಣಾ ಹಜಾರೆ ಅವರ ನಡೆಸಿದ ಭ್ರಷ್ಟಾಚಾರ ವಿರೋಧಿ ಆಂದೋಲನವು ರಾಜಕಾರಣಿಗಳ ವಿರುದ್ಧ ವಿನೂತನ ರೀತಿಯ ಪ್ರತಿಭಟನೆಗೆ ವೇದಿಕೆಯಾಯಿತು.

ರಾಮಲೀಲಾ ಮೈದಾನದಲ್ಲಿ ನಡೆದ ಉಪವಾಸ ಸತ್ಯಾಗ್ರಹ, ವಿವಿಧ ಹಗರಣಗಳ ಬಗ್ಗೆ ಜನರಲ್ಲಿ ಮನೆಮಾಡಿದ್ದ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತೆ ಮಾಡಿತು. ಆಕರ್ಷಕ ಪೋಸ್ಟರ್‌ಗಳು ಹಾಗೂ ಘೋಷಣೆಗಳ ಮೂಲಕ ಜನ ತಮ್ಮ ಸಿಟ್ಟನ್ನು ಹೊರಹಾಕಿದರು.

ಈ ನಡುವೆ ಬಾಲಿವುಟ್ ನಟ ಓಂಪುರಿ ಅವರು ಸಂಸದರನ್ನು `ಅನಕ್ಷರಸ್ಥರು~, `ಹಳ್ಳಿ ಗಮಾರರು~ ಎಂದು ತಮ್ಮ ಎಂದಿನ ಫಿಲ್ಮಿ ಡೈಲಾಗ್ ಮಾದರಿಯಲ್ಲಿ ಗೇಲಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಇದೀಗ ಈ ವಿವಾದವು ಓಂಪುರಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆನ್ನುವ ಹಂತಕ್ಕೆ ಬಂದು ತಲುಪಿದೆ. ಈ ವಿವಾದ ಏನೇ ಇರಲಿ, ನಮ್ಮ ಸಂಸದರಲ್ಲಿ ಶೇ 80ಕ್ಕಿಂತಲೂ ಹೆಚ್ಚಿನವರು ಪದವೀಧರರು, ಇವರಲ್ಲಿ ಕೆಲವರು ಉನ್ನತ ವ್ಯಾಸಂಗವನ್ನೂ ಮಾಡಿದ್ದಾರೆ ಎನ್ನುವುದಕ್ಕೆ ಮಾತ್ರ ದಾಖಲೆ ಇದೆ.

ಒಟ್ಟು 545 ಸಂಸದರಲ್ಲಿ 260 ಮಂದಿ ಪದವೀಧರರು, 142 ಮಂದಿ ಸ್ನಾತಕೋತ್ತರ ಪದವೀಧರರು. ಇಬ್ಬರು ಮಹಿಳೆಯರೂ ಸೇರಿದಂತೆ 24 ಸಂಸದರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇನ್ನು 9 ಮಂದಿ ಪದವಿಗಿಂತ ಕೆಳಹಂತದ ಶಿಕ್ಷಣ ಪಡೆದವರು, 8 ಮಂದಿ ಡಿಪ್ಲೊಮಾ ಪದವೀಧರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.