ಪುಣೆ (ಪಿಟಿಐ): ಸಾಮಾಜಿಕ ಹೋರಾಟಗಾರ ಅಣ್ಣಾ ಸಂಸತ್ತಿನ ಪ್ರಸಕ್ತ ಅಧಿವೇಶನದವರೆಗೂ ಜನಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ನಿರೀಕ್ಷಿಸುವುದಾಗಿ ಹೇಳಿದ್ದು, ಇದು ಸಾಧ್ಯವಾಗದಿದ್ದರೆ 2014ರ ಮಹಾಚುನಾವಣೆಯ ಹೊತ್ತಿಗೆ ಬಲಿಷ್ಠ ಲೋಕಪಾಲ ಕಾಯ್ದೆಗೆ ಒತ್ತಾಯಿಸಿ ತಾವು ಕೈಗೊಂಡಿರುವ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.
`ಜನಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಮೇನಲ್ಲಿ ಕೊನೆಗೊಳ್ಳಲಿರುವ ಸಂಸತ್ ಅಧಿವೇಶನದವರೆಗೆ ಕಾಯುತ್ತೇವೆ. ಇದನ್ನು ಸಾಧ್ಯವಾಗಿಸಲು ಸರ್ಕಾರ ವಿಫಲವಾದ ಪಕ್ಷದಲ್ಲಿ ಆಂದೋಲನ ನಡೆಸಲು ನಮಗೆ ಹೇಗಿದ್ದರೂ ಒಂದೂವರೆ ವರ್ಷದವರಗೆ (ಮುಂದಿನ ಸಾರ್ವತ್ರಿಕ ಚುನಾವಣೆ ವರೆಗೆ) ಕಾಲಾವಕಾಶ ಇದೆ~ ಎಂದು ಹೇಳಿದ್ದಾರೆ.
`ಮಹಾಚುನಾವಣೆ ಘೋಷಣೆಯಾಗುತ್ತಿದ್ದಂತೆ `ಲೋಕಪಾಲ ಜಾರಿ ಮಾಡಿ ಇಲ್ಲವೆ ಮನೆಗೆ ಹೋಗಿ~ ಘೋಷಣಾ ವಾಕ್ಯದೊಂದಿಗೆ ರಾಮಲೀಲಾ ಮೈದಾನದಲ್ಲಿ ಮತ್ತೊಮ್ಮೆ ಧರಣಿ ಕುಳಿತುಕೊಳ್ಳುತ್ತೇನೆ~ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.