ADVERTISEMENT

ಜನಲೋಕಪಾಲ ವಿರೋಧಿ ಸಂಸದರ ಮನೆಗಳಿಗೆ ಘೇರಾವ್: ಅಣ್ಣಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:45 IST
Last Updated 10 ಸೆಪ್ಟೆಂಬರ್ 2011, 10:45 IST

ರಾಳೇಗಣ ಸಿದ್ಧಿ, ಮಹಾರಾಷ್ಟ್ರ (ಐಎಎನ್ ಎಸ್): ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸತ್ ಸದಸ್ಯರ ಮನೆಗಳಿಗೆ ~ಮುತ್ತಿಗೆ~ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜನರನ್ನು ಶನಿವಾರ ಆಗ್ರಹಿಸಿದರು.

~ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸತ್ ಸದಸ್ಯರ ಮನೆಗಳಿಗೆ ನಾವು ಮುತ್ತಿಗೆ ಹಾಕಬೇಕು. ಅವರನ್ನು ಮನೆಯಿಂದ ಹೊರಕ್ಕೆ ಬರಲು ಬಿಡಬಾರದು~ ಎಂದು 74ರ ಹರೆಯದ ಅಣ್ಣಾ ಅಹಮದ್ ನಗರ ಜಿಲ್ಲೆಯ ತಮ್ಮ ಗ್ರಾಮ ರಾಳೇಗಣ ಸಿದ್ಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

~ಇಂತಹ ಸಂಸತ್ ಸದಸ್ಯರನ್ನು ಮರುಆಯ್ಕೆ ಮಾಡಬೇಡಿ. ಮಸೂದೆಯನ್ನು ಬೆಂಬಲಿಸುವ ಸಂಸತ್ ಸದಸ್ಯರು ಮರುಆಯ್ಕೆ ಆಗುವಂತೆ ಖಾತರಿ ಪಡಿಸಬೇಕಾದದ್ದು ನಮ್ಮ ಕರ್ತವ್ಯ. ಮಸೂದೆ ವಿರೋಧಿಸುವವರ ಪರ ಯಾರೊಬ್ಬರೂ ಮತ ಚಲಾಯಿಸಬಾರದು~ ಎಂದು ಹಜಾರೆ ಕರೆ ನೀಡಿದರು.

ಶನಿವಾರ ಬೆಳಗ್ಗೆ ಆರಂಭವಾದ ಅಣ್ಣಾ ತಂಡದ ಸಭೆ ವಿವಿಧ ಸಮಾವೇಶಗಳಲ್ಲಿ ಹೋರಾಟದ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸುವುದು. ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ 45 ಮಂದಿ ಸೇರಿದಂತೆ ನವದೆಹಲಿಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಸತ್ಯಾಗ್ರಹವನ್ನು ಬೆಂಬಲಿಸಿದ್ದ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ನ್ಯಾಯಮೂರ್ತಿ ಸಂತೋಷ ಹೆಗ್ಡೆ,  ಪ್ರಶಾಂತ ಭೂಷಣ್ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಮುಖರಲ್ಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.