ADVERTISEMENT

ಜಮ್ಮು–ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ: ಇಬ್ಬರು ಬಿಎಸ್‌ಎಫ್‌ ಯೋಧರ ಸಾವು

ಮೂವರು ನಾಗರಿಕರಿಗೆ ಗಾಯ

ಏಜೆನ್ಸೀಸ್
Published 3 ಜೂನ್ 2018, 4:46 IST
Last Updated 3 ಜೂನ್ 2018, 4:46 IST
ಬಿಎಸ್‌ಎಫ್‌ – ಸಾಂದರ್ಭಿಕ ಚಿತ್ರ
ಬಿಎಸ್‌ಎಫ್‌ – ಸಾಂದರ್ಭಿಕ ಚಿತ್ರ   

ಜಮ್ಮು: ಇಲ್ಲಿನ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಪಡೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ಅಖನೂರ್‌ನ ಪರಗ್ವಾಲ್‌ ವಲಯದಲ್ಲಿ ಬಿಎಸ್‌ಎಫ್‌ ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಪಡೆ ಗುಂಡಿನ ದಾಳಿ ಹಾಗೂ ಶೆಲ್‌ ದಾಳಿ ನಡೆಸಿದೆ. ಭಾನುವಾರ ನಸುಕಿನಲ್ಲಿ ಆರಂಭವಾಗಿರುವ ದಾಳಿಯು ಬೆಳಗಿನ ವರೆಗೂ ಮುಂದುವರಿದಿದೆ. 2:15ರ ನಸುಕಿನಲ್ಲಿ ಸ್ನಿಪರ್‌ ದಾಳಿಗೆ ಇಬ್ಬರು ಬಿಎಸ್‌ಎಫ್‌ ಯೋಧರು ಗುರಿಯಾಗಿದ್ದಾರೆ.

10 ಬಿಎಸ್‌ಎಫ್‌ ಯೋಧರು ಹಾಗೂ 30 ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ರೇಂಜರ್ಸ್‌ ದಾಳಿ ಮಾಡಿದ್ದು, ಬಿಎಸ್ಎಫ್‌ ಮತ್ತು ರೇಂಜರ್ಸ್‌ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.

ADVERTISEMENT

ವಿ.ಕೆ.ಪಾಂಡೆ(27) ಹಾಗೂ ಎಸ್‌.ಎನ್‌.ಯಾದವ್‌(48) ಮೃತಪಟ್ಟ ಬಿಎಸ್ಎಫ್‌ ಸಿಬ್ಬಂದಿ. ಇದರೊಂದಿಗೆ ಮೂವರು ನಾಗರಿಕರೂ ತೀವ್ರವಾಗಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.