ADVERTISEMENT

ಜಮ್ಮು-ಕಾಶ್ಮೀರ : ಬಿಎಸ್‌ಎಫ್ ಯೋಧರ ಗುಂಡಿಗೆ ನಾಲ್ವರ ಬಲಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 11:38 IST
Last Updated 18 ಜುಲೈ 2013, 11:38 IST
ಬಿಎಸ್‌ಎಫ್ ಯೋಧರ ಗುಂಡಿಗೆ ನಾಲ್ವರು ಬಲಿಯಾದ ಘಟನೆಯನ್ನು ಖಂಡಿಸಿ ಶ್ರೀನಗರದಲ್ಲೂ ಪ್ರತಿಭಟನೆ ವ್ಯಕ್ತವಾಗಿದೆ.-  ಎಎಫ್‌ಪಿ ಚಿತ್ರ
ಬಿಎಸ್‌ಎಫ್ ಯೋಧರ ಗುಂಡಿಗೆ ನಾಲ್ವರು ಬಲಿಯಾದ ಘಟನೆಯನ್ನು ಖಂಡಿಸಿ ಶ್ರೀನಗರದಲ್ಲೂ ಪ್ರತಿಭಟನೆ ವ್ಯಕ್ತವಾಗಿದೆ.- ಎಎಫ್‌ಪಿ ಚಿತ್ರ   

ಜಮ್ಮು/ಶ್ರೀನಗರ (ಪಿಟಿಐ/ಐಎಎನ್‌ಎಸ್): ಗಡಿ ಭದ್ರತಾ ಪಡೆಯ ಶಿಬಿರದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದಾಗ ಸೈನಿಕರು ಗುಂಡು ಹಾರಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ರಂಬಾನ್ ಜಿಲ್ಲೆಯಲ್ಲಿ ಪ್ರಾರ್ಥನಾಮಂದಿರವೊಂದನ್ನು ಯೋಧರು ಅಪವಿತ್ರಗೊಳಿಸಿದರು ಹಾಗೂ ಧಾರ್ಮಿಕ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಿ ಸಾವಿರಾರು ಜನರಿದ್ದ ಗುಂಪು ಬಿಎಸ್‌ಎಫ್ ಯೋಧರ ಶಿಬಿರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇದರಿಂದ ಯೋಧರು ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಅನಧಿಕೃತ ಮೂಲಗಳು ಮೃತರ ಸಂಖ್ಯೆಯನ್ನು 4 ಎಂದು ಹೇಳಿವೆ. ಗಾಯಗೊಂಡವರಲ್ಲಿ ಬಿಎಸ್‌ಎಫ್ ಯೋಧರೂ ಸೇರಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತಂತೆ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ತನಿಖೆಗೆ ಆದೇಶ ನೀಡಿದ್ದಾರೆ.

ಇಲ್ಲಿನ ರಂಬಾನ್, ಗೂಲ್ ಹಾಗೂ ಚಂದ್ರಕೋಟೆ ಪ್ರದೇಶಗಳಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದೆ.

ಮತ್ತೊಂದು ಉದ್ರಿಕ್ತ ಗುಂಪು ರಂಬಾನ್‌ನ ಜಿಲ್ಲಾಧಿಕಾರಿ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದು, ಪೊಲೀಸರು ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಹೇಳಲಾಗಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಪ್ರತಿಭಟನಾಕಾರರು ಅಲ್ಲಲ್ಲಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT