ADVERTISEMENT

ಜಯಲಲಿತಾ ನಿಧನ ಸುದ್ದಿ ಕೇಳಿ 'ಆಘಾತ'ದಿಂದ ಮೃತಪಟ್ಟವರ ಸಂಖ್ಯೆ 280

ಪಿಟಿಐ
Published 10 ಡಿಸೆಂಬರ್ 2016, 12:05 IST
Last Updated 10 ಡಿಸೆಂಬರ್ 2016, 12:05 IST
ಜಯಲಲಿತಾ ನಿಧನ ಸುದ್ದಿ ಕೇಳಿ 'ಆಘಾತ'ದಿಂದ ಮೃತಪಟ್ಟವರ ಸಂಖ್ಯೆ 280
ಜಯಲಲಿತಾ ನಿಧನ ಸುದ್ದಿ ಕೇಳಿ 'ಆಘಾತ'ದಿಂದ ಮೃತಪಟ್ಟವರ ಸಂಖ್ಯೆ 280   

ಚೆನ್ನೈ: ಡಿಸೆಂಬರ್ 5ರಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿಧನರಾದ ಸುದ್ದಿ ಕೇಳಿ ಆಘಾತದಿಂದ ಮೃತಪಟ್ಟ 203 ಮಂದಿಯ ಮಾಹಿತಿಯನ್ನು ಎಐಎಡಿಎಂಕೆ ಶನಿವಾರ ಪ್ರಕಟಿಸಿದೆ.

ತಮಿಳುನಾಡಿನ ಚೆನ್ನೈ, ವೆಲ್ಲೂರ್, ತಿರುವಲ್ಲೂರ್, ತಿರುವಣ್ಣಾಮಲೈ, ಕಡಲೂರ್, ಕೃಷ್ಣಗಿರಿ, ಈರೋಡ್ ಮತ್ತು ತಿರುಪೂರ್ ಮೊದಲಾದ ಜಿಲ್ಲೆಗಳಲ್ಲಿ ಮೃತಪಟ್ಟ ಜನರ ಹೆಸರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಹಿರಂಗ ಪಡಿಸಲಾಗಿದೆ.

ಪಕ್ಷದ ಕಚೇರಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದ ನಂತರ ಮೃತರ ಕುಟುಂಬಗಳಿಗೆ ತಲಾ ₹3 ಲಕ್ಷ  ಪರಿಹಾರ ಧನ ಘೋಷಿಸಲಾಗಿದೆ.

ADVERTISEMENT

ಜಯಲಲಿತಾ ಅವರ ನಿಧನ ಸುದ್ದಿ ಕೇಳಿ ಮೃತಪಟ್ಟಿದ್ದ 77 ಮಂದಿಯ ಕುಟುಂಬಕ್ಕೆ ಈಗಾಗಲೇ ಪರಿಹಾರ ಧನ ನೀಡಲಾಗಿದೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ಹೇಳಿವೆ.

ಇಲ್ಲಿಯವರೆಗೆ ಜಯಾ ನಿಧನದ ಆಘಾತದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 280 ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.