ADVERTISEMENT

ಜಯಾ ಸಾವು ಪ್ರಕರಣ: ತನಿಖಾ ಆಯೋಗದ ನ್ಯಾಯಮೂರ್ತಿ ಅಧಿಕಾರ ಸ್ವೀಕಾರ

ಏಜೆನ್ಸೀಸ್
Published 27 ಅಕ್ಟೋಬರ್ 2017, 12:47 IST
Last Updated 27 ಅಕ್ಟೋಬರ್ 2017, 12:47 IST
ಜೆ. ಜಯಲಲಿತಾ (ಸಂಗ್ರಹ ಚಿತ್ರ)
ಜೆ. ಜಯಲಲಿತಾ (ಸಂಗ್ರಹ ಚಿತ್ರ)   

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭದ ಕುರಿತು ತನಿಖೆ ನಡೆಸಲು ತಮಿಳುನಾಡು ಸರ್ಕಾರ ರಚಿಸಿರುವ ಏಕವ್ಯಕ್ತಿ ಆಯೋಗದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಎ. ಆರ್ಮುಘ ಸ್ವಾಮಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಜಯಲಲಿತಾ ಅವರ ಸಾವು ಮತ್ತು ಆಸ್ಪತ್ರೆಗೆ ದಾಖಲಾದ ಬಗೆಗಿನ ತನಿಖೆ ಪಾರದರ್ಶಕವಾಗಿರಲಿದೆ ಎಂದು ಸ್ವಾಮಿ ಹೇಳಿದ್ದಾರೆ.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಸೆ.25 ರಂದು ಘೋಷಣೆ ಮಾಡಿತ್ತು.

ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭ ಮತ್ತು ಡಿ.5 ರಂದು ಅವರು ಮೃತಪಟ್ಟ ಸಂದರ್ಭದ ಬಗ್ಗೆ ತನಿಖಾ ಆಯೋಗ ತನಿಖೆ ನಡೆಸಲಿದೆ. ಸರ್ಕಾರದ ಆದೇಶದಂತೆ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.