ADVERTISEMENT

ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 10:33 IST
Last Updated 9 ಜನವರಿ 2017, 10:33 IST
ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ
ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ   

ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಿಷೇಧವನ್ನು ವಿರೋಧಿಸಿರುವ ನಟ ಕಮಲ್ ಹಾಸನ್, ಜಲ್ಲಿಕಟ್ಟು ಸ್ಪರ್ಧೆಯಿಂದಾಗಿ ಪ್ರಾಣಿ ಹಿಂಸೆ ನಡೆಯುತ್ತದೆ ಎಂದು ವಾದಿಸುವವರು ಬಿರಿಯಾನಿಯನ್ನೂ ನಿಷೇಧಿಸಬೇಕು ಎಂದಿದ್ದಾರೆ.

ಚೆನ್ನೈನಲ್ಲಿ ಇಂಡಿಯ ಟುಡೇ ಸೌತ್ ಕಾನ್‍ಕ್ಲೇವ್ ನಲ್ಲಿ ಮಾತನಾಡಿದ ಕಮಲ್ ಹಾಸನ್ ,ತಮಿಳುನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿದೆ ಜಲ್ಲಿಕಟ್ಟು, ನೀವು ಜಲ್ಲಿಕಟ್ಟು ನಿಷೇಧಿಸುವುದಾದರೆ, ಬಿರಿಯಾನಿ ಕೂಡಾ ನಿಷೇಧಿಸಿ. ನಾನು ಜಲ್ಲಿಕಟ್ಟು ಸ್ಪರ್ಧೆಯ ದೊಡ್ಡ ಅಭಿಮಾನಿ. ಹಲವಾರು ಬಾರಿ ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.

ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು 2014ರಲ್ಲಿ ಸುಪ್ರೀಂಕೋರ್ಟ್ ಪ್ರಸ್ತುತ ಸ್ಪರ್ಧೆಯನ್ನು ನಿಷೇಧಿಸಿತ್ತು.

ADVERTISEMENT

ಈ ಹಿಂದೆಯೂ ಕಮಲ್ ಹಾಸನ್ ಜಲ್ಲಿಕಟ್ಟು ಸ್ಪರ್ಧೆ ನಿಷೇಧದ ವಿರುದ್ಧ ಮಾತೆತ್ತಿದ್ದರು.

ಸ್ಪೇನ್‍ನ ಗೂಳಿ ಕಾಳಗ ಮತ್ತು  ಜಲ್ಲಿಕಟ್ಟುವಿನ ನಡುವೆ ಯಾವುದೇ ಸಾಮ್ಯತೆಗಳಿಲ್ಲ. ಸ್ಪೇನ್‍ನಲ್ಲಿ ಗೂಳಿಗಳಿಗೆ ಹಿಂಸೆ ಮಾಡಿ ಅವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಆದರೆ ತಮಿಳುನಾಡಿನಲ್ಲಿ ಗೂಳಿಗಳನ್ನು ದೇವರಂತೆ ಪೂಜಿಸಲಾಗುತ್ತದೆ.

ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಗೂಳಿಗಳ ಕೊಂಬು ಮುರಿಯುವುದಾಗಲೀ ಮಾಡುವುದಿಲ್ಲ. ಇಲ್ಲಿ ಅವುಗಳನ್ನು ಮಣಿಸಲಾಗುತ್ತದೆಯೇ ಹೊರತು ದೈಹಿಕ ಹಿಂಸೆ ನೀಡಲಾಗುವುದಿಲ್ಲ ಎಂದು ಕಮಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.