ADVERTISEMENT

ಜಲ ಯೋಜನೆ: ವಾಷಿಂಗ್ಟನ್‌ನಲ್ಲಿ ಏ.11ರಿಂದ ಭಾರತ-ಪಾಕಿಸ್ತಾನ ಅಧಿಕಾರಿಗಳ ಸಭೆ

ಏಜೆನ್ಸೀಸ್
Published 21 ಮಾರ್ಚ್ 2017, 11:18 IST
Last Updated 21 ಮಾರ್ಚ್ 2017, 11:18 IST
ಜಲ ಯೋಜನೆ: ವಾಷಿಂಗ್ಟನ್‌ನಲ್ಲಿ ಏ.11ರಿಂದ ಭಾರತ-ಪಾಕಿಸ್ತಾನ ಅಧಿಕಾರಿಗಳ ಸಭೆ
ಜಲ ಯೋಜನೆ: ವಾಷಿಂಗ್ಟನ್‌ನಲ್ಲಿ ಏ.11ರಿಂದ ಭಾರತ-ಪಾಕಿಸ್ತಾನ ಅಧಿಕಾರಿಗಳ ಸಭೆ   

ನವದೆಹಲಿ: ಕಿಶನ್‌ಗಂಗಾ ಹಾಗೂ ರಾಟ್ಲೆ ಜಲ ವಿದ್ಯುತ್ ಯೋಜನೆ ಕುರಿತ ಮಾತುಕತೆಗೆ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಸಜ್ಜಾಗಿದ್ದು, ವಾಷಿಂಗ್ಟನ್‌ ನಲ್ಲಿ ಮುಂದಿನ ತಿಂಗಳು ಭೇಟಿಯಾಗಲಿದ್ದಾರೆ.

ಏಪ್ರಿಲ್‌ 11–13ರ ನಡುವೆ ಉಭಯ ರಾಷ್ಟ್ರಗಳ ಜಲ ಕಾರ್ಯಾಲಯದ ಕಾರ್ಯದರ್ಶಿಗಳ ನಡುವೆ ಮಾತುಕತೆ ನಡೆಯಲಿದೆ ಎಂಬುದನ್ನು ಅಧಿಕಾರಿಗಳು ಅಧಿಕೃವಾಗಿ ಮಂಗಳವಾರ ತಿಳಿಸಿದರು.

ಅಮೆರಿಕ ಮತ್ತು ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಯೋಜನೆ ಸಂಬಂಧ ಚರ್ಚೆ ನಡೆಯುವ ಕುರಿತು ಪಾಕಿಸ್ತಾನದ ಜಲ ಮತ್ತು ವಿದ್ಯುತ್‌ ಸಚಿವ ಖವಾಜಾ ಆಸಿಫ್‌ ಇಸ್ಲಾಮಾಬಾದ್‌ನಲ್ಲಿ ಈ ಹಿಂದೆ ತಿಳಿಸಿದ್ದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ADVERTISEMENT

ನವದೆಹಲಿಯಲ್ಲಿ 2016ರ ಜುಲೈನಲ್ಲಿ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಚರ್ಚೆ ನಡೆಸಿದ್ದರಾದರೂ ಯಾವುದೇ ಅಂತಿಮ ನಿರ್ಣಯ ಕೈಗೊಂಡಿರಲಿಲ್ಲ.

ಪಾಕಿಸ್ತಾನ ಆಕ್ಷೇಪ: ಜಮ್ಮು ಮತ್ತು ಕಾಶ್ಮೀರದಲ್ಲಿ ರೂಪಿಸಲಾಗುತ್ತಿರುವ 330 ಮೆವ್ಯಾ ಸಾಮರ್ಥ್ಯದ ಕಿಶನ್‌ಗಂಗಾ ಹಾಗೂ 850 ಮೆವ್ಯಾ ಸಾಮರ್ಥ್ಯದ ರಾಟ್ಲೆ ಯೋಜನೆಯ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.