ADVERTISEMENT

ಜಿಎಸ್‌ಟಿ ದರ ಪತ್ತೆಗೆ ಆ್ಯಪ್‌ ಬಿಡುಗಡೆ

ಪಿಟಿಐ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಜಿಎಸ್‌ಟಿ ದರ ಪತ್ತೆಗೆ ಆ್ಯಪ್‌ ಬಿಡುಗಡೆ
ಜಿಎಸ್‌ಟಿ ದರ ಪತ್ತೆಗೆ ಆ್ಯಪ್‌ ಬಿಡುಗಡೆ   

ನವದೆಹಲಿ: ಜಿಎಸ್‌ಟಿಯಲ್ಲಿ ಸರಕು ಮತ್ತು ಸೇವೆಗಳ ದರವನ್ನು ಕಂಡುಕೊಳ್ಳಲು ಕೇಂದ್ರ ಸರ್ಕಾರ ‘GST Rates Finder’ ಆ್ಯಪ್‌ ಬಿಡುಗಡೆ ಮಾಡಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶನಿವಾರ ಆ್ಯಪ್‌ ಬಿಡುಗಡೆ ಮಾಡಿದ್ದಾರೆ.

ಆ್ಯಂಡ್ರಾಯ್ಡ್‌ ಬೆಂಬಲಿತ ಆ್ಯಪ್‌ ಇದಾಗಿದೆ. ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಅಂತರ್ಜಾಲದ ಅಗತ್ಯವಿಲ್ಲದೇ ಬಳಕೆ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ.

ವರ್ತಕರಷ್ಟೇ ಅಲ್ಲದೆ ಗ್ರಾಹಕರು ಸಹ ತಾವು ಖರೀದಿಸುವ ವಸ್ತುಗಳಿಗೆ ನೀಡುತ್ತಿರುವ ದರ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಆ್ಯಪ್‌ ಉಪಯುಕ್ತವಾಗಿದೆ ಎಂದು ತಿಳಿಸಿದೆ.

ಸರಕು ಅಥವಾ ಸೇವೆಯ ಹೆಸರಿನಿಂದ ಅದರ ದರವನ್ನು ಹುಡುಕಬಹುದು.ವರ್ತಕರಿಗೆ ಒಂದು ನಿರ್ದಿಷ್ಟ ಸರಕಿನ ಎಚ್‌ಎಸ್‌ಎನ್‌ ಕೋಡ್‌ (Harmonised System of Nomenclature) ಸಹ ಸಿಗಲಿದೆ. ಆ ಕೋಡ್‌ ಆಧಾರದ ಮೇಲೆ ಅದಕ್ಕೆ ನಿಗದಿಯಾಗಿರುವ ತೆರಿಗೆ ದರ ಕಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.