ADVERTISEMENT

ಜಿಎಸ್‍ಟಿ ವ್ಯವಸ್ಥೆ ಯಶಸ್ವಿಯಾಗಲ್ಲ ಎಂದಿದ್ದರು ಮೋದಿ!

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 11:44 IST
Last Updated 1 ಜುಲೈ 2017, 11:44 IST
ಜಿಎಸ್‍ಟಿ ವ್ಯವಸ್ಥೆ ಯಶಸ್ವಿಯಾಗಲ್ಲ ಎಂದಿದ್ದರು ಮೋದಿ!
ಜಿಎಸ್‍ಟಿ ವ್ಯವಸ್ಥೆ ಯಶಸ್ವಿಯಾಗಲ್ಲ ಎಂದಿದ್ದರು ಮೋದಿ!   

ನವದೆಹಲಿ: ‘ಜಿಎಸ್‌ಟಿ ಕೇವಲ ಆರ್ಥಿಕ ಬದಲಾವಣೆಗೆ ಸೀಮಿತವಾಗಿಲ್ಲ. ಸಾಮಾಜಿಕ ಬದಲಾವಣೆಗೂ ನಾಂದಿ ಹಾಡಲಿದೆ. ಅತ್ಯಂತ ಸಂಕೀರ್ಣ ಸ್ವರೂಪದ  ತೆರಿಗೆ ವ್ಯವಸ್ಥೆಯಿಂದ ಭಾರತಕ್ಕೆ ಆರ್ಥಿಕ ವಿಮೋಚನೆ ಸಿಗಲಿದೆ. ಕಪ್ಪುಹಣ, ತಪ್ಪುಲೆಕ್ಕಗಳಿಗೆ ಕಡಿವಾಣ ಬೀಳಲಿದೆ’ ಜಿಎಸ್‌ಟಿ ಎಂದರೆ ‘ಗುಡ್‌ ಸಿಂಪಲ್‌ ಟ್ಯಾಕ್ಸ್‌’ (ಉತ್ತಮ ಮತ್ತು ಸರಳ ತೆರಿಗೆ)- ಗುರುವಾರ ಮಧ್ಯರಾತ್ರಿ ಜಿಎಸ್‍ಟಿ ಜಾರಿ ಮಾಡುವ ಹೊತ್ತಲ್ಲಿ ಪ್ರಧಾನಿ ಮೋದಿ ಹೇಳಿದ ಮಾತುಗಳಿವು.

ಆದರೆ ವರ್ಷಗಳ ಹಿಂದೆ ನರೇಂದ್ರ ಮೋದಿಯವರು ಜಿಎಸ್‍ಟಿ ವ್ಯವಸ್ಥೆಯನ್ನು ವಿರೋಧಿಸಿದ್ದರು.

'ಜಿಎಸ್‍ಟಿ ಬಗ್ಗೆ ಬಿಜೆಪಿ ಮತ್ತು ಗುಜರಾತ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಜಿಎಸ್‌ಟಿ ಎಂದಿಗೂ ಯಶಸ್ವಿಯಾಗುವುದಿಲ್ಲ' ಎಂದಿದ್ದರು ಮೋದಿ.

ADVERTISEMENT

ಗುರುವಾರ ಜಿಎಸ್‍ಟಿ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ಅಣಿಯಾಗುತ್ತಿದ್ದಂತೆ ಕಾಂಗ್ರೆಸ್, ಮೋದಿಯವರ ಹಳೆ ವಿಡಿಯೊವೊಂದನ್ನು ಟ್ವೀಟ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.