ADVERTISEMENT

ಜಿಎಸ್‌ಟಿ ಸಭೆಯ ನಿರ್ಧಾರದಿಂದ ಈ ಬಾರಿ ದೀಪಾವಳಿ ಮುಂಚಿತವಾಗಿ ಬಂದಿದೆ: ಮೋದಿ

ಏಜೆನ್ಸೀಸ್
Published 7 ಅಕ್ಟೋಬರ್ 2017, 9:00 IST
Last Updated 7 ಅಕ್ಟೋಬರ್ 2017, 9:00 IST
ಜಿಎಸ್‌ಟಿ ಸಭೆಯ ನಿರ್ಧಾರದಿಂದ ಈ ಬಾರಿ ದೀಪಾವಳಿ ಮುಂಚಿತವಾಗಿ ಬಂದಿದೆ: ಮೋದಿ
ಜಿಎಸ್‌ಟಿ ಸಭೆಯ ನಿರ್ಧಾರದಿಂದ ಈ ಬಾರಿ ದೀಪಾವಳಿ ಮುಂಚಿತವಾಗಿ ಬಂದಿದೆ: ಮೋದಿ   

ದ್ವಾರಕಾ: ‘ಕೆಲವು ಸರಕು ಮತ್ತು ಸೇವೆಗಳ ತೆರಿಗೆ ದರ ಇಳಿಸಲು ಜಿಎಸ್‌ಟಿ ಮಂಡಳಿ ಸಭೆಯು ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಬಾರಿ ದೀಪಾವಳಿ ಸಂಭ್ರಮ ಹಬ್ಬಕ್ಕೆ ಮುಂಚಿತವಾಗಿಯೇ ಬಂದಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

27 ಸರಕು, ಸೇವೆಗಳ ತೆರಿಗೆ ದರ ಇಳಿಸಲು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿ ಮೋದಿ ಶನಿವಾರ ಮಾತನಾಡಿದ್ದಾರೆ.

ಎರಡು ದಿನಗಳ ಗುಜರಾತ್‌ ಪ್ರವಾಸಕ್ಕೆ ಬಂದಿರುವ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ADVERTISEMENT

ಒಖಾ ಮತ್ತು ಬೆಟ್‌ ದ್ವಾರಕಾ ನಡುವಿನ ಸೇತುವೆ ಕಾಮಗಾರಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ₹ 5,825 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೂ ಇದೇ ವೇಳೆ ಮೋದಿ ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.