ADVERTISEMENT

ಜೆಇಇ ಅಡ್ವಾನ್ಸ್‌: ಹರಿಯಾಣದ ಪ್ರಣವ್‌ ದೇಶಕ್ಕೆ ಮೊದಲ ರ್‍ಯಾಂಕ್‌

ಪಿಟಿಐ
Published 10 ಜೂನ್ 2018, 7:25 IST
Last Updated 10 ಜೂನ್ 2018, 7:25 IST

ಬೆಂಗಳೂರು: ಜೆಇಇ ಅಡ್ವಾನ್ಸ್‌ (ಜಂಟಿ ಪ್ರವೇಶ ಪರೀಕ್ಷೆ) ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಹರಿಯಾಣದ ಪಂಚುಕುಲ ನಗರದ ಪ್ರಣವ್‌ ಗೋಯಲ್‌  360ಕ್ಕೆ 337 ಅಂಕಗಳನ್ನು ಪಡೆದು ಮೊದಲ ರ್‍ಯಾಂಕ್ ಗಳಿಸಿದ್ದಾರೆ.

ಈ ವರ್ಷದ ಪರೀಕ್ಷೆಯನ್ನು ಐಐಟಿ ಕಾನ್ಪುರ ಏರ್ಪಡಿಸಿತ್ತು. ದೇಶದ 23 ಐಐಟಿಗಳಿಂದ ಒಟ್ಟು 11,279 ಸೀಟುಗಳಿದ್ದವು. ಇದಕ್ಕೆ ದೇಶದಾದ್ಯಂತ 1,55,158 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದರು. ಇದರಲ್ಲಿ 18,138 ಮಂದಿ ಅರ್ಹತೆ ಪಡೆದಿದ್ದಾರೆ.

ಕೋಟಾದ ಸಾಹಿಲ್‌ ಜೈನ್‌ ಎರಡನೇ ಹಾಗೂ ದೆಹಲಿಯ ಕಳಶ್‌ ಗುಪ್ತ ಮೂರನೇ ರ್‍ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ಕೋಟಾದ ಮಿನಾಲ್‌ ಪ್ರಕಾಶ್‌ ಮೊದಲಿಗರಾಗಿದ್ದಾರೆ.

ADVERTISEMENT

ದೇಶದ ಎಲ್ಲ ಐಐಟಿಗಳು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಹಾಗೂ ರಾಜೀವ್‌ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಗಳ(ಆರ್‌ಜಿಐಪಿಟಿ) ಪ್ರವೇಶಕ್ಕೆ ಈ ಪರೀಕ್ಷೆಯಲ್ಲಿ ಮೆರಿಟ್‌ ಪಡೆಯಬೇಕು.

ಮೊದಲ ಹತ್ತು ರ‍್ಯಾಂಕ್‌ ಗಳಿಸಿದ ವಿದ್ಯಾರ್ಥಿಗಳು

1. ಪ್ರಣವ್‌ ಗೋಯಲ್‌–ಪಂಚಕುಲ

2. ಸಾಹಿಲ್‌ ಜೈನ್‌–ಕೋಟ

3. ಕಳಶ್ ಗುಪ್ತ–ದೆಹಲಿ

4. ಪವನ್‌ ಗೋಯಲ್‌–ಕೋಟ

5. ಮವೂರಿ ಶಿವ ಕೆ.ಎಂ.–ವಿಜಯವಾಡ

6. ಮೀನಾಲ ಪ್ರಕಾಶ್‌–ಕೋಟ

7. ಕೆ.ವಿ.ಆರ್.ಹೇಮಂತ್‌ ಕುಮಾರ್–ಹೈದರಾಬಾದ್

8. ರಿಶಿ ಅಗರ್ವಾಲ್–ಪಟಿಯಾಲ

9.ಲೇ ಜೈನ್–ಜಿಹಾನಬಾದ್‌

10. ನೀಲ್‌ ಆರ್ಯನ್‌ ಗುಪ್ತ–ವೈಶಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.