ADVERTISEMENT

ಜೆಡಿ (ಯು) ಮೊದಲ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 11:03 IST
Last Updated 15 ಮಾರ್ಚ್ 2014, 11:03 IST

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆ ಹಿನ್ನೆಲೆ ಬಿಹಾರ ಹಾಗೂ ಇತರ ನಾಲ್ಕು ರಾಜ್ಯಗಳಿಗಾಗಿ ಜಾತ್ಯತೀತ ಜನತಾದಳ (ಸಂಯುಕ್ತ) ಶನಿವಾರ 15 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ಲೋಕಸಭೆ ಸ್ಪೀಕರ್‌ ಮೀರಾ ಕುಮಾರ್‌ ಅವರ ವಿರುದ್ಧ ಮಾಜಿ ಐಎಎಸ್‌ ಅಧಿಕಾರಿ ಕೆ.ಪಿ. ರಾಮಯ್ಯ ಅವರನ್ನು ಕಣ್ಣಕ್ಕಿಳಿಸಿದೆ.

ಮೀಸಲು ಕ್ಷೇತ್ರವಾಗಿರುವ ಸಸರಾಮನಲ್ಲಿ  ಮೀರಾಕುಮಾರ್ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಸಂಜಯ್‌ ಪಾಸ್ವಾನ್‌ ಬಿಜೆಪಿ ಹುರಿಯಾಳು ಎನಿಸಿದ್ದಾರೆ. ಇದರಿಂದ ಸಸರಾಮ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಡಳಿತದ ಗುಜರಾತ್‌ನಲ್ಲಿ ನಾಲ್ಕು ಮತ್ತು ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ತಲಾ ಒಂದೊಂದು  ಕ್ಷೇತ್ರಗಳ  ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ADVERTISEMENT

ಜಾರ್ಖಂಡ್‌ನಲ್ಲಿ ಅಲ್ಲಿನ ರಾಜ್ಯ ಘಟಕದ ಅಧ್ಯಕ್ಷ ಜಲೇಶ್ವರ್ ಮಹಾತೊ ಅವರನ್ನು ಗಿರಿಧ್‌ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿರುವ ಜೆಡಿ(ಯು), ಮಹೇಶ್‌ ಯಾದವ್‌ ಅವರನ್ನು ಚಾತ್ರಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಪಕ್ಷದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ 38 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿ(ಯು) ನಿರ್ಧರಿಸಿದೆ. ಆ ಪೈಕಿ ಮೊದಲ ಪಟ್ಟಿಯಲ್ಲಿ ಆರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಕರಕಟ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಹಾಬಲಿ ಸಿಂಗ್ ಏಕಮಾತ್ರ ಹಾಲಿ ಸಂಸದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.