ADVERTISEMENT

ಜೈಲಲ್ಲಿ ಫೇಸ್‌ಬುಕ್‌ ಬಳಸಿದ ಕೈದಿಗಳ ವಿರುದ್ಧ ಕೋರ್ಟ್ ನಿರ್ಧಾರ– ಸಚಿವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಕೋಯಿಕ್ಕೋಡ್‌ (ಐಎಎನ್‌ಎಸ್‌): ಜೈಲಿನಲ್ಲಿ ವಿವಿಧ ಭಂಗಿಗಳಲ್ಲಿ ಪೋಟೊ ತೆಗೆಸಿಕೊಂಡು  ಸಾಮಾ ಜಿಕ ಜಾಲ ತಾಣಗಳಲ್ಲಿ ಹಾಕಿದ ಕೈದಿಗಳ ವಿರುದ್ಧ ಕೇರಳ ಹೈಕೋರ್ಟ್‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಕೇರಳ ಗೃಹಸಚಿವ ರಾಧಾ ಕೃಷ್ಣನ್‌ ಹೇಳಿದ್ದಾರೆ. 

ಜೈಲಿನಲ್ಲಿ ಸಾಮಾಜಿಕ ಜಾಲ ತಾಣ ಬಳಸುತ್ತಿರುವ ವಿಚಾರಣಾ ಧೀನ ಕೈದಿಗಳ ವಿರುದ್ಧ ನ್ಯಾಯಾ ಲಯ ಶೀಘ್ರ ಕ್ರಮ ಕೈಗೊಳ್ಳಲಿದೆ. ಫೇಸ್‌ಬುಕ್‌ ಬಳಕೆ ಮಾಡಿದ ಮೂವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾ ಲಯ ತೀರ್ಮಾನಿಸಲಿದೆ. ಜೈಲಿನ ಡಿಜಿಪಿ, ಪೊಲೀಸ್‌ ವರಿಷ್ಠಾ ಧಿಕಾರಿ ಹಾಗೂ ಗೃಹ ಕಾರ್ಯ­ದರ್ಶಿ ಒಳ ಗೊಂಡ ಉನ್ನತ ಮಟ್ಟದ ಸಮಿತಿ ಘಟನೆ ಬಗ್ಗೆ ತನಿಖೆ ನಡೆಸಲಿದೆ.

ಅಲ್ಲದೆ ಜೈಲಿನ ಭದ್ರತೆ­ಯನ್ನೂ ಇನ್ನಷ್ಟು ಉತ್ತಮ ಪಡಿಸ­ಲಾಗು ವುದು. ಜೈಲಿನಲ್ಲಿ ಮೊಬೈಲ್‌ ಫೋನ್‌ ಪತ್ತೆ ಸಾಧನ ಅಳವಡಿಸ ಲಾಗುವುದು. ನ್ಯಾಯಾಲಯ­ಕ್ಕೆ ನಡೆದ ಘಟನೆ ಬಗ್ಗೆ ವಿವರಿಸಿ, ಒಪ್ಪಿಗೆ ಪಡೆದು ಆರೋಪ ಎದುರಿಸುತ್ತಿರುವ ಕೈದಿಗಳನ್ನು ಬೇರೆಡೆ ಜೈಲಿಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು. 

ಸಿಪಿಐಎಂ ನಾಯಕ ಟಿ.ಪಿ ಚಂದ್ರ ಶೇಖರ್‌ರವರನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜೈಲಿನಲ್ಲಿ ರುವ ಮೂವರು ವಿಚಾರಣಾಧೀನ ಕೈದಿಗಳಾದ ಕೋಡಿ ಸುನ್ನಿ, ಕಿರ್ಮನಿ ಮನೋಜ್‌ ಹಾಗೂ ಮೊಹಮ್ಮದ್‌ ಶಫಿ ಎಂಬುವರು ಜೈಲಿನಲ್ಲಿ ಇತರ ಕೈದಿಗಳೊಂದಿಗೆ ವಿವಿಧ ಭಂಗಿಗಳಲ್ಲಿ  ಫೋಟೊ ತೆಗೆಸಿಕೊಂಡಿದ್ದರು.  ಇವು­ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.