ADVERTISEMENT

ಟಿಟಿಡಿ ಟ್ರಸ್ಟ್‌ಗೆ ಕ್ರಿಶ್ಚಿಯನ್‌ ಶಾಸಕಿ ನೇಮಕಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ವಂಗಾಲಪುಡಿ ಅನಿತಾ
ವಂಗಾಲಪುಡಿ ಅನಿತಾ   

ಹೈದರಾಬಾದ್‌: ಕ್ರೈಸ್ತ ಸಮುದಾಯಕ್ಕೆ ಸೇರಿದ ಶಾಸಕಿ ವಂಗಾಲಪುಡಿ ಅನಿತಾ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ಗೆ ನೇಮಕ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ತೆಲುಗು ದೇಶಂನ ಅನಿತಾ ಅವರು ಹಿಂದೂ ಧರ್ಮಕ್ಕೆ ಸೇರಿದವರನ್ನು ಮದುವೆಯಾಗಿದ್ದಾರೆ. ‘ನಾನು ಕ್ರಿಶ್ಚಿಯನ್. ನನ್ನ ಬ್ಯಾಗ್ ಮತ್ತು ಕಾರಿನಲ್ಲಿ ಯಾವಾಗಲೂ ಬೈಬಲ್‌ನ ಪ್ರತಿ ಇಟ್ಟುಕೊಂಡಿರುತ್ತೇನೆ. ಹಿಂದೂವನ್ನು ಮದುವೆಯಾಗಿದ್ದರೂ ನಾನು ಕ್ರಿಶ್ಚಿಯನ್‌’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಮಂಡಳಿಯನ್ನು ಪುನರ್‌ರಚಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಆಗ್ರಹಿಸಿದೆ.

ADVERTISEMENT

ಆಗಮ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವವರನ್ನು ಮಂಡಳಿಗೆ ನೇಮಿಸಬೇಕೆ ಹೊರತು ಅನಿತಾ ಅವರಂತಹ ಹಿಂದೂಯೇತರ ವ್ಯಕ್ತಿಗಳನ್ನಲ್ಲ ಎಂದು ವಿಶ್ವ ಹಿಂದೂ ಪರಿಷತ್‌ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.