ADVERTISEMENT

ಟಿಬೆಟನ್ನರ ದೇಶಾಂತರ ಸರ್ಕಾರಕ್ಕೆ 53 ವರ್ಷ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಧರ್ಮಶಾಲಾ (ಐಎಎನ್‌ಎಸ್): ಚೀನಾದಿಂದ ಗಡೀಪಾರುಗೊಂಡ ಟಿಬೆಟನ್ನರ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ  ಟಿಬೆಟ್ ದೇಶಾಂತರ ಸರ್ಕಾರಕ್ಕೆ ಈಗ 53 ವರ್ಷ ತುಂಬಿದೆ.

ಈ ವೇಳೆ ಪತ್ರಿಕಾ ಹೇಳಿಕೆ ನೀಡಿರುವ ಟಿಬೆಟನ್ ನಾಯಕರು, ಚೀನಾದಲ್ಲಿ ಇತರೆ ಸಮುದಾಯಗಳು ಜೀವನ ನಡೆಸುವಂತೆ ಟಿಬೆಟನ್ನರೂ ಸ್ವತಂತ್ರವಾಗಿ ಬದುಕಲು ಅವಕಾಶ ಕೊಡಬೇಕು ಎಂದು ಚೀನಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತ್ಯೇಕತೆಗಾಗಿ ಹೋರಾಡುತ್ತಿರುವ ಟಿಬೆಟನ್ನರು ಮತ್ತು ಚೀನಿಯರ ನಡುವೆ  ಸಮನ್ವಯ ಸಾಧಿಸುವಂತೆ ಪದೇ ಪದೇ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಎರಡು ಸಮುದಾಯಗಳ ನಡುವೆ ಯಾವುದೇ ಸಂಧಾನ ಏರ್ಪಡಿಸಿಲ್ಲ ಎಂದರು.

ಈ ಹೇಳಿಕೆಯನ್ನು ಅಲ್ಲಗಳೆದಿರುವ ಚೀನಾ ಸರ್ಕಾರದ ರಾಜಕೀಯ ಸಲಹಾ ಸಮಿತಿ ಅಧ್ಯಕ್ಷ ಯು ಝೆಂಗ್‌ಶೇಂಗ್, ಟಿಬೆಟನ್ನರ ಗುರು ದಲೈಲಾಮ ಅವರು ಕೇಳುತ್ತಿರುವ `ಸಂಪೂರ್ಣ ಸ್ವಾಯುತ್ತತೆ'  ಸಂವಿಧಾನ ವಿರೋಧಿಯಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.