ADVERTISEMENT

ಟೆಲಿಕಾಂ ಕಂಪೆನಿಗಳ ಹೂಡಿಕೆ ರಕ್ಷಣೆಗೆ ಸರ್ಕಾರ ಕ್ರಮ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ಕೆಲ ವಿದೇಶಿ ಟೆಲಿಕಾಂ ಸೇವಾ ಕಂಪೆನಿಗಳ ಪರವಾನಿಗೆ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅವುಗಳ ಹೂಡಿಕೆ ರಕ್ಷಿಸಲು ದೂರ ಸಂಪರ್ಕ ಇಲಾಖೆ ಕಾನೂನು ತಜ್ಞರ ಸಲಹೆ ಪಡೆಯಲು ನಿರ್ಧರಿಸಿದೆ.

ಅದರ ಜತೆ ಹಣಕಾಸು ಹಾಗೂ ವಿದೇಶಾಂಗ ಸಚಿವಾಲಯದ ಅಭಿಪ್ರಾಯವನ್ನು ದೂರ ಸಂಪರ್ಕ ಇಲಾಖೆ ಪಡೆಯಲಿದೆ. 2ಜಿ ಹಗರಣದಿಂದಾಗಿ  ಸುಪ್ರೀಂ ಕೋರ್ಟ್ ರದ್ದುಪಡಿಸಿದ 122 ಪರವಾನಿಗೆಗಳಲ್ಲಿ ವಿದೇಶಿ ಕಂಪೆನಿಗಳಾದ ಸಿಸ್ಟೆಮಾ ಹಾಗೂ ಟೆಲೆನಾರ್  ಸಹ ಸೇರಿದ್ದು, ಈ ಕಂಪೆನಿಗಳ ಹೂಡಿಕೆ ಹಿತಾಸಕ್ತಿ ರಕ್ಷಿಸಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಅರ್ಟಾನಿ ಜನರಲ್ ಅವರ ಜತೆ ಸಹ ಈ ವಿಷಯ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ವ್ಯವಹಾರಗಳ  ಇಲಾಖೆ , ಕಾನೂನು ವ್ಯವಹಾರಗಳ ಇಲಾಖೆ, ಕೈಗಾರಿಕಾ ವ್ಯವಹಾರಗಳ ಇಲಾಖೆಯ ಜತೆ ದೂರ ಸಂಪರ್ಕ ಇಲಾಖೆ ಈಗಾಗಲೇ ಚರ್ಚೆ ನಡೆಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.