ಪಣಜಿ(ಪಿಟಿಐ): ಮಾರ್ಚ್ 7ರಂದು ತೆರೆಕಂಡಿರುವ ಬಾಲಿವುಡ್‌ನ ‘ಟೋಟಲ್ ಸಿಯಾಪಾ’ ಚಲನಚಿತ್ರದಲ್ಲಿ ದೇಶವಿರೋಧಿ ಭಾವನೆ ಕೆರಳಿಸುವ ಅಂಶಗಳಿದ್ದು, ಪ್ರದರ್ಶನವನ್ನು ಕೂಡಲೇ ನಿಷೇಧಿಸಬಕೆಂದು ಹಿಂದೂ ಸಂಘಟನೆಯೊಂದು ಆಗ್ರಹಿಸಿದೆ.
ಹಿಂದೂ ಜನಜಾಗೃತಿ ಸಮಿತಿಯ ಕೇಂದ್ರ ಸಿನಿಮಾ ಪ್ರಮಾಣಪತ್ರ ಮಂಡಳಿಗೆ ಮನವಿ ಸಲ್ಲಿಸಿದ್ದು, ಸೆನ್ಸಾರ್ ಪ್ರಮಾಣಪತ್ರವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ. ‘ಪಾಕಿಸ್ತಾನ ಪ್ರಾಯೋಜಕತ್ವದ ಭಯೋತ್ಪಾದನೆಯಲ್ಲಿ ಸಾವಿರಾರು ಭಾರತೀಯರು ಮೃತಪಟ್ಟಿದ್ದಾರೆ. ಆದರೆ, ಈ ಚಲನಚಿತ್ರದಲ್ಲಿ ಪಾಕಿಸ್ತಾನವನ್ನು ವೈಭವೀಕರಿಸಲಾಗಿದೆ. ಸರ್ಕಾರ ಈ ಚಲನಚಿತ್ರವನ್ನು ಕೂಡಲೇ ನಿಷೇಧಿಸಬೇಕು’ ಎಂದು ಎಚ್‌ಜೆಎಸ್ ಸಂಚಾಲಕ ಮನೋಜ್ ಸೋಲಂಕಿ ಆಗ್ರಹಿಸಿದ್ದಾರೆ.
ಪಾಕಿಸ್ತಾನಿ ನಟ ಅಲಿ ಜಫರ್ ಮತ್ತು ಯಾಮಿ ಗೌತಮ್ ನಟಿಸಿರುವ ಟೊಟಲ್ ಸಿಯಾಪಾ ಚಿತ್ರವನ್ನು ಎ. ನಿವಾಸ್ ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.