ADVERTISEMENT

ಟ್ಯಾಂಕರ್‌ ಸ್ಫೋಟ: 7 ಜನ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಠಾಣೆ (ಪಿಟಿಐ): ಪೆಟ್ರೋಲ್‌ ತುಂಬಿದ್ದ ಟ್ಯಾಂಕರ್‌ ಮಗುಚಿ, ನಂತರ ಸ್ಫೋಟ­ಗೊಂಡ ಪರಿಣಾಮ ಏಳು ಜನರು ಸ್ಥಳದಲ್ಲೇ ಸಜೀವ ದಹನಗೊಂಡ ಘಟನೆ ಶನಿವಾರ ಇಲ್ಲಿ ನಡೆದಿದೆ.

ಅಹಮದಾಬಾದ್‌ನಿಂದ ಮುಂಬೈಗೆ   ಪೆಟ್ರೋಲ್‌ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್‌ ಈ ಮಾರ್ಗದ ರಾಷ್ಟ್ರೀಯ ಹೆದ್ದಾ­ರಿಯ ಚಾವೋರಿ ಚೆಕ್‌­­ಪೋಸ್ಟ್‌ ಬಳಿ ಮಗುಚಿ­ ಬಿದ್ದು, ನಂತರ ಬೆಂಕಿ ಹತ್ತಿ­ಕೊಂಡು ಸ್ಫೋಟ­ಗೊಂಡಿದೆ. ಆಗ ಟ್ಯಾಂಕ­ರ್‌­ನಲ್ಲಿದ್ದ ಮೂವರು ಹಾಗೂ ನಾಲ್ವರು ಪಾದಚಾರಿಗಳು ಸಜೀವ ದಹನ­ವಾಗಿ­ದ್ದಾರೆ. ಇತರ ಕೆಲವರು ಗಾಯ­ಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿ­ದ್ದಾರೆ ಎಂದು ವಿಕೋಪ ನಿಯಂ­ತ್ರಣ ಕೊಠಡಿ ಮುಖ್ಯಸ್ಥ ಜೈದೀಪ್‌ ವಿಸಾವೆ ತಿಳಿಸಿದ್ದಾರೆ.

ಅಗ್ನಿಶಾಗಮಕ ದಳ ಮತ್ತು ಅಂಬು­ಲೆನ್ಸ್‌ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ರಕ್ಷಣಾ ಕಾರ್ಯ ಕೈಗೊಂಡರು. ಮೃತರನ್ನು ಇದುವರೆಗೆ ಯಾರೆಂದು ಗುರುತಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.