ನವದೆಹಲಿ (ಐಎಎನ್‌ಎಸ್): ಪಶ್ಚಿಮ ಬಂಗಾಳದಲ್ಲಿರುವ ಶಾಂತಿನಿಕೇತನದ ರವೀಂದ್ರನಾಥ ಟ್ಯಾಗೋರರ ವಸ್ತುಸಂಗ್ರಹಾಲಯವು ಅತ್ಯಾಧುನಿಕ ಬದಲಾವಣೆಗಳೊಂದಿಗೆ ಶೀಘ್ರವೇ ಪುನರ್ ನಿಮಾರ್ಣಗೊಳ್ಳಲಿದೆ. ನೂತನ ಕಟ್ಟಡ ವಿಶ್ವದರ್ಜೆಯದ್ದಾಗಿರುತ್ತದೆ. ಸಂಗ್ರಹಾಲಯದ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಕಳೆದ ವರ್ಷ ವಿಶ್ವಭಾರತಿ ವಿ.ವಿ ಆಯೋಜಿಸಿದ್ದ ರಾಷ್ಟ್ರೀಯ ಕಟ್ಟಡ ವಿನ್ಯಾಸಗಾರರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೀಲಿನಕ್ಷೆಗಳಲ್ಲಿ 19ನ್ನು ಆಯ್ಕೆ ಮಾಡಲಾಗಿದೆ.
ಮೇ 7ರಂದು ನಡೆಯಲಿರುವ ಟ್ಯಾಗೋರರ ಜಯಂತಿ ಆಚರಣೆ ಸಂದರ್ಭದಲ್ಲಿ ಅಂತಿಮವಾಗಿ ಆಯ್ಕೆಯಾದ ಒಂದು ನೀಲಿ ನಕ್ಷೆಯನ್ನು ಬಹಿರಂಗಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.