ನವದೆಹಲಿ: ಬಿಜೆಪಿ ವಿಜಯ ಖಚಿತ ಎಂದು ಗೊತ್ತಾಗುತ್ತಿರುವಂತೆಯೇ ಟ್ವೀಟ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿದೆ ಟ್ವೀಟ್ ಲೋಕದಲ್ಲೊಂದು ಸುತ್ತು...
* ರಾಜನಾಥ್ ಸಿಂಗ್:
ನರೇಂದ್ರ ಮೋದಿ ಅವರ ಜತೆ ಫೋನಿನಲ್ಲಿ ಮಾತಾಡಿದೆ. ಚುನಾವಣೆಯಲ್ಲಿ ಬಿಜೆಪಿ ಸಾಧನೆ ಖುಷಿ ತಂದಿದೆ. ಜಯಭೇರಿ ನಮ್ಮದೇ.
* ಎನ್.ಚಂದ್ರಬಾಬು ನಾಯ್ಡು
ನರೇಂದ್ರ ಮೋದಿ ಅವರ ಜತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ.
* ಒಮರ್ ಅಬ್ದುಲ್ಲಾ
ಕೆಟ್ಟ ಸ್ಥಿತಿ ಊಹಿಸಿದ್ದೆ. ಆದರೆ ವಾಸ್ತವ ಅದಕ್ಕಿಂತ ಕೆಟ್ಟದ್ದಾಗಿದೆ. ಮತ ಎಣಿಕೆ ಮುಂದುವರಿದಂತೆಲ್ಲ ಪರಿಸ್ಥಿತಿ ಉಲ್ಟಾ ಆಗಲಿ ಎಂದು ಆಶಿಸುವೆ.
* ಆಶಾ ಭೋಸ್ಲೆ:
ನಮ್ಮ ಮುಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು.
* ರಾಜೀವ ಶುಕ್ಲಾ
ಕಾಂಗ್ರೆಸ್ ಸೋಲಿಗೆ ನಾವೆಲ್ಲರೂ ಕಾರಣ. ನರೇಂದ್ರ ಮೋದಿ ಕನಸೊಂದನ್ನು ಮಾರಿದರು. ಜನತೆ ಅದಕ್ಕೆ ಚಂದಾದಾರರಾದರು.
–೦–
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.