ADVERTISEMENT

ಠಾಣೆ ಕಟ್ಟಡ ಕುಸಿತ: ಸಾವಿನ ಸಂಖ್ಯೆ 72ಕ್ಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST
ಠಾಣೆ ಕಟ್ಟಡ ಕುಸಿತ: ಸಾವಿನ ಸಂಖ್ಯೆ 72ಕ್ಕೆ
ಠಾಣೆ ಕಟ್ಟಡ ಕುಸಿತ: ಸಾವಿನ ಸಂಖ್ಯೆ 72ಕ್ಕೆ   

ಠಾಣೆ (ಪಿಟಿಐ): ಇಲ್ಲಿನ ಶಿಲ್‌ಫಟಾ ಬಳಿ ಗುರುವಾರ ಸಂಭವಿಸಿದ ಏಳು ಅಂತಸ್ತಿನ ನಿರ್ಮಾಣ ಹಂತದ ಅಕ್ರಮ ಕಟ್ಟಡ ಕುಸಿತದಲ್ಲಿ ಸತ್ತವರ ಸಂಖ್ಯೆ 72ಕ್ಕೆ ಏರಿದೆ.

`ಸತತ 48 ಗಂಟೆಗಳ ಜಟಿಲವಾದ ರಕ್ಷಣಾ ಕಾರ್ಯಾಚರಣೆ ವೇಳೆ 62 ಜನರನ್ನು ಜೀವಂತವಾಗಿ ಕಟ್ಟಡದ ಅವಶೇಷಗಳ ಅಡಿಯಿಂದ ಹೊರ ತೆಗೆಯಲಾಗಿದೆ. ಈಗ ಅದರೊಳಗೆ ಯಾರೂ ಇಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಪರಿಹಾರ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ್ದೇವೆ' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕಮಾಂಡರ್ ಅಲೋಕ್ ಅವಸ್ಥಿ ಶನಿವಾರ ಸುದ್ದಿ ಸಂಸ್ಥೆಗೆ ತಿಳಿಸಿದರು

ಇಬ್ಬರ ಬಂಧನ: ಈ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ. 

ಹಸುಳೆ ರಕ್ಷಣೆ, ಕುಟುಂಬ `ಕಾಣೆ': ಅವಶೇಷಗಳಡಿ ಸಿಲುಕಿದ್ದ ಹತ್ತು ತಿಂಗಳ ಹೆಣ್ಣು ಕೂಸನ್ನು 29 ಗಂಟೆಗಳ ನಂತರ ಸುರಕ್ಷಿತವಾಗಿ ರಕ್ಷಿಸಿ ವಿಪತ್ತು ನಿರ್ವಹಣಾ ಪಡೆ ನಿಟ್ಟುಸಿರು ಬಿಟ್ಟಿತು. ಆದರೆ ಪವಾಡಸದೃಶ್ಯವಾಗಿ  ಬದುಕುಳಿದ ಮಗುವನ್ನು ನೋಡಿ ಸಂಭ್ರಮಿಸಲು ಅವಳ ಕುಟುಂಬದವರ‌್ಯಾರು ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.