ಚೆನ್ನೈ (ಪಿಟಿಐ): ಕಾಂಗ್ರೆಸ್ ನೇತೃತ್ವದ ಯುಪಿಎದಿಂದ ಡಿಎಂಕೆಯನ್ನು ‘ಪ್ರತ್ಯೇಕಿಸಲು’ ಮತ್ತು ‘ನಿರ್ನಾಮ’ ಮಾಡಲು ಎಐಎಡಿಎಂಕೆಯ ಮುಖ್ಯಸ್ಥೆ ಜಯಲಲಿತಾ ಮತ್ತು ಕೆಲ ಮಾಧ್ಯಮದವರು ಯತ್ನಿಸುತ್ತಿದ್ದಾರೆ ಎಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಭಾನುವಾರ ಆರೋಪಿಸಿದ್ದಾರೆ.
2ಜಿ ತರಂಗಾಂತರ ಹಗರಣದಿಂದ ಆಗಿರುವ ನಷ್ಟದ ಬಗ್ಗೆ ವಿವಿಧ ವ್ಯಕ್ತಿಗಳು ನೀಡಿರುವ ಅಂದಾಜು ಬೇರೆ ಬೇರೆ ರೀತಿಯೇ ಇದೆ. ಸಿಬಿಐ ರೂ 22 ಸಾವಿರ ಕೋಟಿ ನಷ್ಟ ಎಂದು ಅಂದಾಜಿಸಿದ್ದರೆ, ಬಿಜೆಪಿಯ ಅರುಣ್ ಶೌರಿ ಅವರು ರೂ 30 ಸಾವಿರ ಕೋಟಿ’ ಎಂದಿದ್ದಾರೆ ಎಂದು ಕರುಣಾನಿಧಿ ಅವರು ತಮ್ಮ ಪಕ್ಷದ ಮುಖವಾಣಿ ‘ಮುರಸೋಳಿ’ಯಲ್ಲಿ ಬರೆದುಕೊಂಡಿದ್ದಾರೆ.
ಜಯಲಲಿತಾ ಮತ್ತು ಕೆಲವು ಮಾಧ್ಯಮದವರು ಈ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡಿದ್ದಾರೆ. ‘ಯುಪಿಎದಿಂದ ಡಿಎಂಕೆಯನ್ನು ಪ್ರತ್ಯೇಕಿಸುವುದು ಮತ್ತು ಪಕ್ಷವನ್ನು ನಾಶಗೊಳಿಸುವುದು’ ಅವರ ಉದ್ದೇಶ ಎಂದು ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.