ADVERTISEMENT

ತಮಿಳುನಾಡು ಮಹಿಳೆ ಸಾರಥ್ಯ:ಇಂದು ರಿಸ್ಯಾಟ್-1 ಉಡಾವಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಚೆನ್ನೈ (ಐಎಎನ್‌ಎಸ್): ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೊ, ಗುರುವಾರ  ದೂರಸಂವೇದಿ ರಾಡಾರ್ ಬಿಂಬಗ್ರಾಹಿ (ಇಮೇಜಿಂಗ್) ಉಪಗ್ರಹವನ್ನು (ರಿಸ್ಯಾಟ್-1) ಉಡಾವಣೆ ಮಾಡಲಿದೆ.
ಈ ಉಪಗ್ರಹ ಯೋಜನೆಯ ನಿರ್ದೇಶಕರಾಗಿ ದುಡಿದವರು ಮಹಿಳೆ ಎನ್ನುವುದು ವಿಶೇಷ. ತಮಿಳುನಾಡಿನ ಎನ್. ವಳರ್‌ಮತಿ ಅವರು ಈ ಉಪಗ್ರಹ ಯೋಜನೆಯ ನಿರ್ದೇಶಕಿ.

`ಉಪಗ್ರಹ ಕಾರ್ಯಕ್ರಮದ ನಿರ್ದೇಶಕಿಯಾಗಿ, ಉಪಗ್ರಹದ ಉಡಾವಣೆ ಮತ್ತು ಅದರ ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಳರ್‌ಮತಿ ಅವರ ಮೇಲಿದೆ~ ಎಂದು ಹೆಸರು ಹೇಳಲು ಇಚ್ಛಿಸದ  ಇಸ್ರೊ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಟ್ಟು 1,858 ಕೆ.ಜಿ ತೂಕದ  ರಿಸ್ಯಾಟ್-1ನ ಕಾರ್ಯ ನಿರ್ವಹಣೆಯ ಅವಧಿ ಐದು ವರ್ಷಗಳು. ವಿಪತ್ತುಗಳ  ಮುನ್ಸೂಚನೆ, ಕೃಷಿ ಅರಣ್ಯ ಮಾಹಿತಿ ಪಡೆಯಲು ಈ ಉಪಗ್ರಹವನ್ನು ಬಳಸಬಹುದು. ಅತ್ಯಂತ ಸ್ಪಷ್ಟವಾದ ಚಿತ್ರಗಳು ಮತ್ತು ಸೂಕ್ಷ್ಮತರಂಗ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಉಪಗ್ರಹಕ್ಕೆ ಇರುವುದರಿಂದ ರಕ್ಷಣಾ ಉದ್ದೇಶಕ್ಕೂ ಇದನ್ನು ಬಳಸಬಹುದು.

ಇಸ್ರೊ 2009ರಲ್ಲಿ ರಿಸ್ಯಾಟ್-2 ಉಪಗ್ರಹವನ್ನು ಉಡಾವಣೆ ಮಾಡಿತ್ತುವಳರ್‌ಮತಿ ಅವರು ಇಸ್ರೊದ ಉಪಗ್ರಹ ಕಾರ್ಯಕ್ರಮವೊಂದರ ನಿರ್ದೇಶಕರಾಗಿ ದುಡಿದ ಎರಡನೇ ಮಹಿಳೆಯಾಗಿದ್ದಾರೆ. ಆದರೆ ದೂರ ಸಂವೇದಿ ಉಪಗ್ರಹ ಯೋಜನೆಯೊಂದರ ಮೊದಲ ನಿರ್ದೇಶಕಿ ಎಂಬ ಹೆಗ್ಗಳಿಗೆ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.