ADVERTISEMENT

ತೀಸ್ತಾ ಸೆತಲ್ವಾಡ್: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ನಿರೀಕ್ಷಣಾ ಜಾಮೀನು ವಿಚಾರಣೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಅಹಮದಾಬಾದ್‌ (ಪಿಟಿಐ): ಗುಜ­ರಾತ್‌ನ ಗುಲ್‌ಬರ್ಗ್ ಸೊಸೈಟಿ ಅ್ಯವವ­ಹಾರ ಪ್ರಕರಣದ ಆರೋಪಿ­ಗಳಾದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್‌ ಮತ್ತು ಆಕೆಯ ಪತಿ ಜಾವೇದ್‌ ಆನಂದ್‌ ಸಲ್ಲಿಸಿದ್ದ ನಿರೀ­ಕ್ಷಣಾ ಜಾಮೀನು ಅರ್ಜಿಯ ವಿಚಾ­ರಣೆ  ಮಂಗಳವಾರ ಮುಕ್ತಾಯ­ಗೊಂಡಿದೆ.  ಅರ್ಜಿಯ ವಿಚಾರಣೆ ನಡೆಸಿದ ಇಲ್ಲಿನ ಸೆಷನ್ಸ್‌ ನ್ಯಾಯಾ­ಲಯ ಈ ತಿಂಗಳ 25ಕ್ಕೆ ತೀರ್ಪನ್ನು  ಕಾಯ್ದಿರಿಸಿದೆ.

ವಿದೇಶಿ ನೆರವನ್ನು ದುರುಪಯೋಗ ಪಡಿಸಿಕೊಂಡಿರುವ ತೀಸ್ತಾ ಅವರಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಸರ್ಕಾರಿ ವಕೀಲ ಚೋಕ್ಸಿ ಆಕ್ಷೇಪ ವ್ಯಕ್ತಪಡಿಸಿದರು. ‘ಕೋಮುಗಲಭೆಯ ಸಂತ್ರಸ್ತರಿಗಾಗಿ ನೀಡಿದ್ದ ವಿದೇಶಿ ನೆರವಿನ ಲಕ್ಷಾಂತರ ರೂಪಾಯಿಗಳನ್ನು ತೀಸ್ತಾ ಮನೆಯ ಕಿರಾಣಿ ಸಾಮಗ್ರಿ ಖರೀದಿ, ಸಿನಿಮಾ ವೀಕ್ಷಣೆ, ಬ್ಯೂಟಿ ಪಾರ್ಲರ್‌ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮದ್ಯ ಖರೀದಿಗೆ  ಬಳಸಿಕೊಂಡಿದ್ದಾರೆ’ ಎಂದು ಚೋಕ್ಸಿ ಆರೋಪಿಸಿದರು.

‘ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ಸರ್ಕಾರಿ ಸಂಸ್ಥೆ ತನ್ನ ಅಧಿಕಾರ ವ್ಯಾಪ್ತಿ ಮೀರಿ  ವರ್ತಿಸುತ್ತಿದೆ. ಈ ಪ್ರಕರಣ ಧಾರ್ಮಿಕ ದತ್ತಿ ಆಯೋಗ ವ್ಯಾಪ್ತಿಗೆ ಬರುತ್ತದೆ ಎಂದು ತೀಸ್ತಾ ಪರ ವಕೀಲರು ವಾದಿಸಿದರು. ‘ಕೋಮುಗಲಭೆ ಸಂತ್ರಸ್ತರ ನೆರವಿಗೆ ನಿಂತಿರುವ ತೀಸ್ತಾ ಅವರ ಕಾರ್ಯವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಶ್ಲಾಘಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.