ADVERTISEMENT

ತೃತೀಯ ರಂಗ ರಚನೆ ಯತ್ನ ಎಡಪಕ್ಷಗಳ ತಪ್ಪು ಹೆಜ್ಜೆ– ಬರ್ಧನ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆಗೆ ಮುನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಗಮನ ಕೇಂದ್ರೀಕರಿಸಿರುವ ಪ್ರಾದೇಶಿಕ ಪಕ್ಷಗಳ ಜತೆ  ಸೇರಿಕೊಂಡು ತೃತೀಯ ರಂಗ ರಚಿಸಲು ಪ್ರಯತ್ನ ಮಾಡಿದ್ದು ಎಡ ರಂಗಗಳ ತಪ್ಪು ಹೆಜ್ಜೆ ಎಂಬುದನ್ನು ಸಿಪಿಐ ಒಪ್ಪಿಕೊಂಡಿದೆ.

ಪ್ರಾದೇಶಿಕ ಪಕ್ಷಗಳ ಜತೆ ತೃತೀಯ ರಂಗ ರಚನೆಗೆ ಮಾತುಕತೆ ನಡೆಸದೇ ಇದ್ದಿದ್ದರೆ ತೃತೀಯ ರಂಗ ರಚನೆಯ ವೈಫಲ್ಯದ ಮುಖಭಂಗ ತಪ್ಪಿಸಿಕೊಳ್ಳಬಹು­ದಾಗಿತ್ತು ಎಂದು ಸಿಪಿಐ ನಾಯಕ ಎ.ಬಿ. ಬರ್ಧನ್‌ ಹೇಳಿದರು.

ತೃತೀಯ ರಂಗವನ್ನು ಚುನಾವಣೆಯ ನಂತರ ರಚಿಸುವ ಪ್ರಯತ್ನ ಮಾಡಿದ್ದರೆ ಯಶಸ್ವಿ ಆಗುತ್ತಿತ್ತು ಎಂದು ಅವರು ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಎಡಪಕ್ಷಗಳ ಜತೆ ಹೊಂದಾಣಿಕೆ ಪ್ರಸ್ತಾವ ಮಾಡಿದ ಜಯಲಲಿತಾ ಅವರು ಸಿಪಿಐಗೆ ಕೇವಲ ಒಂದು ಸ್ಥಾನ ನೀಡಲು ಮುಂದಾಗಿದ್ದು  ಬಹಳ ನಿರಾಶೆ ಉಂಟು ಮಾಡಿತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.