ADVERTISEMENT

ತೆಲಂಗಾಣ: ಬಿಗು ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಹೈದರಾಬಾದ್(ಐಎಎನ್‌ಎಸ್):  ಪ್ರತ್ಯೇಕ ತೆಲಂಗಾಣಕ್ಕೆ ಬೆಂಬಲಿಸಿ  ನಾಗಾರ್ಜುನ ಸಾಗರ ಕ್ಷೇತ್ರದ ಶಾಸಕ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಜನಾರೆಡ್ಡಿ ಅವರು ತಮ್ಮ ಸ್ಥಾನಕ್ಕೆ  ರಾಜೀನಾಮೆಯನ್ನು ನೀಡುವಂತೆ  ಅವರ ನಿವಾಸದ ಎದುರು  ಪ್ರತಿಭಟನೆ ನಡೆಸುತ್ತ್ದ್ದಿದ್ದ   ಸರ್ಕಾರಿ ನೌಕರರ ಬಂಧನದಿಂದ ನಲಗೊಂಡ ಜಿಲ್ಲಾದ್ಯಂತ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಜಾಗ್ರತೆಯ ಕ್ರಮವಾಗಿ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದಿರುವ ಪೊಲೀಸರು  ಭಾನುವಾರ 150ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

ತೆಲಂಗಾಣದ ಭಾಗದ  ಸಚಿವರು ತಮ್ಮ  ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದು  ಪಂಚಾಯತ್  ಸಚಿವ ಕೆ.ಜನಾ ರೆಡ್ಡಿ ಅವರು ರಾಜೀನಾಮೆ ನೀಡಿರಲಿಲ್ಲ. ಜನಾರೆಡ್ಡಿ ಅವರು ತೆಲಂಗಾಣ ಕಾಂಗ್ರೆಸ್ ಮುಖಂಡರ ಸಂಚಾಲಕ ಸಮಿತಿಯ ಸಹ ಅಧ್ಯಕ್ಷರು ಆಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.