ADVERTISEMENT

ತೆಲಂಗಾಣ: ರೈಲು ತಡೆ ಚಳವಳಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST
ತೆಲಂಗಾಣ: ರೈಲು ತಡೆ ಚಳವಳಿ
ತೆಲಂಗಾಣ: ರೈಲು ತಡೆ ಚಳವಳಿ   

ಹೈದರಾಬಾದ್, (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.  ಶನಿವಾರದಿಂದ ಮೂರು ದಿನಗಳ ರೈಲು ತಡೆ ಚಳವಳಿ ಆರಂಭವಾಗಿದ್ದು, ಟಿಆರ್‌ಎಸ್ ಮತ್ತು ಕಾಂಗ್ರೆಸ್‌ನ ಜನಪ್ರತಿನಿಧಿಗಳು ಸೇರಿದಂತೆ ಅನೇಕ ಜನರನ್ನು ಪೊಲೀಸರು ಬಂಧಿಸಿದ್ದಾರೆ.
 
ಟಿಆರ್‌ಎಸ್ ಅಧ್ಯಕ್ಷ ಚಂದ್ರಶೇಖರ್ ರಾವ್ ಅವರ ಪುತ್ರ ಶಾಸಕ ಕೆ. ಟಿ. ರಾಮರಾವ್, ಪುತ್ರಿ ಮತ್ತು ತೆಲಂಗಾಣ ಜಾಗೃತಿ ವೇದಿಕೆಯ ಅಧ್ಯಕ್ಷೆ  ಕೆ.ಕವಿತಾ ಬಂಧಿತರಲ್ಲಿ  ಪ್ರಮುಖರು.

ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರಾಮರಾವ್ ಮತ್ತು ಬೆಂಬಲಿಗರನ್ನು ಪೊಲೀಸರು ಬಂಧಿಸಿದರು. ಮೌಲಾ ಅಲಿ ರೈಲು ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಧರಣಿ ಕುಳಿತಿದ್ದ ವಿತಾ ಮತ್ತು ಅವರ ಬೆಂಬಲಿಗರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಮೇಡಕ್ ಸಂಸದೆ ವಿಜಯ್ ಶಾಂತಿ ಅವರನ್ನು ಲಕಡಿ ಕಾ ಪುಲ್ ನಿಲ್ದಾಣದ ಬಳಿ, ಕರೀಂನಗರದ ಕಾಂಗ್ರೆಸ್ ಸಂಸದ ಪೊನ್ನಂ ಪ್ರಭಾಕರ್ ರೆಡ್ಡಿ ಅವರನ್ನು ಕರೀಂನಗರ ಜಿಲ್ಲೆಯಲ್ಲಿ ಮತ್ತು ವಾರಂಗ ಲ್‌ನಲ್ಲಿ ಕಾಂಗ್ರೆಸ್ ಸಂಸದ ಎಸ್. ರಾಜಯ್ಯ ಅವರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು 124 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಸ್ಪಷ್ಟ ಘೋಷಣೆಗೆ ಆಗ್ರಹ
ಹೈದರಾಬಾದ್, (ಪಿಟಿಐ):
ನಿಗದಿತ ಕಾಲಮಿತಿಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ರಚಿಸುವ ಬಗ್ಗೆ ಘೋಷಣೆ ಮಾಡುವವರೆಗೆ ಅನಿರ್ದಿಷ್ಟಾವಧಿಯ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಕಳೆದ 33 ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರುವ ತೆಲಂಗಾಣ ಪ್ರದೇಶದ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.