ಪಣಜಿ(ಐಎಎನ್ಎಸ್): ಸಹೋದ್ಯೋಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ‘ತೆಹೆಲ್ಕಾ’ ಸಂಪಾದಕ ತರುಣ್ ತೇಜ್‌ಪಾಲ್ ಅವರ ‘ಪೊಲೀಸ್ ಕಸ್ಟಡಿ’ಯನ್ನು ಶನಿವಾರ ನಾಲ್ಕು ದಿನಗಳ ಅವಧಿಗೆ ವಿಸ್ತರಿಸಲಾಗಿದೆ.
ಲೈಂಗಿಕ ಹಲ್ಲೆ ಆರೋಪ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಕಸ್ಟಡಿ ವಿಸ್ತರಿಸುವಂತೆ ಪೊಲೀಸರು ಸಲ್ಲಿಸಿದ ಬೇಡಿಕೆಯನ್ನು ಪರಿಗಣಿಸಿ ಸ್ಥಳೀಯ ನ್ಯಾಯಾಧೀಶರು ತೇಜ್‌ಪಾಲ್ ಅವರ ‘ಪೊಲೀಸ್ ಕಸ್ಟಡಿ’ಯನ್ನು ನಾಲ್ಕು ದಿನಗಳ ವರೆಗೆ ವಿಸ್ತರಿಸಿದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.