ADVERTISEMENT

ತ್ರಿವಳಿ ತಲಾಖ್‌ ಕರಡು ಮಸೂದೆಗೆ ಒಪ್ಪಿಗೆ

ಪಿಟಿಐ
Published 15 ಡಿಸೆಂಬರ್ 2017, 20:14 IST
Last Updated 15 ಡಿಸೆಂಬರ್ 2017, 20:14 IST
ತ್ರಿವಳಿ ತಲಾಖ್‌ ಕರಡು ಮಸೂದೆಗೆ ಒಪ್ಪಿಗೆ
ತ್ರಿವಳಿ ತಲಾಖ್‌ ಕರಡು ಮಸೂದೆಗೆ ಒಪ್ಪಿಗೆ   

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕಾಗಿ ಬಳಸುವ ‘ತ್ರಿವಳಿ ತಲಾಖ್‌’ ಪದ್ಧತಿಯನ್ನು ನಿಷೇಧಿಸುವ ಮತ್ತು ಅಸಿಂಧುಗೊಳಿಸುವ ಕರಡು ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕಾನೂನು ಉಲ್ಲಂಘಿಸಿ ತ್ರಿವಳಿ ತಲಾಖ್‌ ನೀಡುವ ಗಂಡನಿಗೆ ಮೂರು ವರ್ಷ ಶಿಕ್ಷೆ ವಿಧಿಸುವ ಪ್ರಸ್ತಾವವೂ ಕರಡು ಮಸೂದೆಯಲ್ಲಿ ಇದೆ.

ಗೃಹ ಸಚಿವ ರಾಜನಾಥ್‌ ಸಿಂಗ್ ನೇತೃತ್ವದ ಅಂತರ ಸಚಿವಾಲಯ ಗುಂಪು ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಸಚಿವರಾದ ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ, ರವಿಶಂಕರ್‌ ಪ್ರಸಾದ್‌ ಮತ್ತು ಪಿ.ಪಿ. ಚೌಧರಿ ಗುಂಪಿನ ಇತರ ಸದಸ್ಯರು.

‘ಮದುವೆಗೆ ಸಂಬಂಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಸೂದೆ’ಯು ತ್ರಿವಳಿ ತಲಾಖ್‌ಗೆ ಮಾತ್ರ ಅನ್ವಯವಾಗುತ್ತದೆ. ತ್ರಿವಳಿ ತಲಾಖ್‌ಗೆ ಒಳಗಾದ ಮಹಿಳೆಯರು ನ್ಯಾಯಾಲಯಕ್ಕೆ ಹೋಗಿ ತನಗೆ ಮತ್ತು ತನ್ನ 18 ವರ್ಷದೊಳಗಿನ ಮಕ್ಕಳಿಗೆ ಜೀವನಾಂಶ ಪಡೆಯುವ ಅವಕಾಶ ಮಸೂದೆಯಲ್ಲಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.